ಲೆಬನಾನ್ನ ಬೈರೂತ್ ಬಂದರಿನಲ್ಲಿ ಉಂಟಾದ ಸ್ಫೋಟಕ್ಕೆ ಕಾರಣವಾದ ರಾಸಾಯನಿಕ ವಸ್ತು ಯಾವುದು? | ಅಮಾಲ್ಗಮ್ (Amalgam) ಅನ್ನು ಹೇಗೆ ಮತ್ತು ಏಕೆ ತಯಾರಿಸುತ್ತಾರೆ? | ಪಾದರಸವನ್ನು ಪಾತ್ರೆಗಳಿಗೆ ತುಂಬಲು ಕಾರಣವೇನು?

ಲೆಬನಾನ್ನ ಬೈರೂತ್ ಬಂದರಿನಲ್ಲಿ ಉಂಟಾದ ಸ್ಫೋಟಕ್ಕೆ ಕಾರಣವಾದ ರಾಸಾಯನಿಕ ವಸ್ತು ಯಾವುದು?

2020ರ ಆಗಸ್ಟ್ 4 ರಂದು ಲೆಬನಾನ್ನ ಬೈರೂತ್ (Bairut) ನ ಬಂದರಿನ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ್ದು, ಸುಮಾರು 158ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನ್ಯಾಯಾಲಯದ ಆದೇಶದ ಕಾರಣದಿಂದ ಬೈರೂತ್ ಬಂದರಿನ ಗೋದಾಮಿನಲ್ಲಿ ಸುಮಾರು 2,750 ಟನ್ನಷ್ಟು ಅಮೋನಿಯಂ ನೈಟ್ರೇಟ್ಗೆ ಯಾವುದೇ ಸುರಕ್ಷತೆ ಇಲ್ಲದ ಕಾರಣ ಬೆಂಕಿ ತಗುಲಿ ಸ್ಫೋಟ ಸಂಭವಿಸಿತ್ತು.

ಅಮೋನಿಯಂ ನೈಟ್ರೇಟ್ (NH4NO3): ಇದನ್ನು ಕೃಷಿ ಕ್ಷೇತ್ರದಲ್ಲಿ ಸಾರಜನಕಯುಕ್ತ ರಸಗೊಬ್ಬರಗಳಲ್ಲಿ ಬಳಸುತ್ತಾರೆ. ಸ್ಫೋಟಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಗಣಿಗಾರಿಕೆ, ಕ್ವಾರೆ & ನಿರ್ಮಾಣ ಕ್ಷೇತ್ರದಲ್ಲೂ ಸ್ಫೋಟಕವಾಗಿ ಬಳಕೆ ಮಾಡಲಾಗುತ್ತದೆ.

ಅಮಾಲ್ಗಮ್ (Amalgam) ಅನ್ನು ಹೇಗೆ ಮತ್ತು ಏಕೆ ತಯಾರಿಸುತ್ತಾರೆ?

ಅಮಾಲ್ಗಮ್ ಎಂದರೆ, ಲೋಹದೊಂದಿಗೆ ಪಾದರಸ ಬೆರೆಸಿ ತಯಾರಿಸಿದ ವಸ್ತು. ಅಮಾಲ್ಗಮ್ನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ.

ಉದಾ:- ಚಿನ್ನಕ್ಕೆ ಪಾದರಸವನ್ನು ಬೆರೆಸಿ, ಚಿನ್ನದ ಅಮಾಲ್ಗಮ್ನ್ನು ತಯಾರಿಸುತ್ತಾರೆ. ಬೆಳ್ಳಿ ಅಮಾಲ್ಗಮ್ನ್ನು ದಂತದ ಚಿಕಿತ್ಸೆಗೆ, ಸೋಡಿಯಂ ಅಮಾಲ್ಗಮ್ನ್ನು ಸೋಡಿಯಂ ಅನಿಲ ದೀಪ ತಯಾರಿಸಲು ಬಳಸುತ್ತಾರೆ. ಪ್ರಾಚೀನ ಕಾಲದಲ್ಲಿ ದರ್ಪಣಗಳ ಹಿಂಬದಿಯಲ್ಲಿ ತವರದ ಅಮಾಲ್ಗಮ್ ಅನ್ನು ಬಳಸುತ್ತಿದ್ದರು. ಚಿನ್ನವನ್ನು ಅದಿರಿನಿಂದ ಶುದ್ದೀಕರಣ ಮಾಡಲು ಚಿನ್ನದ ಅಮಾಲ್ಗಮ್ನ್ನು ಬಳಕೆ ಮಾಡಲಾಗುತ್ತದೆ.

ಅಮಾಲ್ಗಮ್ ತಯಾರಾಗದ ಲೋಹಗಳು: ಕಣ್ಣಣ, ಟಂಗ್ಸ್ಟನ್, ಟಿಂಟಾಲಂ & ಪ್ಲಾಟಿನಂ ಲೋಹಗಳೊಂದಿಗೆ ಪಾದರಸ ಬೆರೆಸಿ ಅಮಾಲ್ಗಮ್ ತಯಾರಿಸಲಾಗುವುದಿಲ್ಲ.

ಪಾದರಸವನ್ನು ಪಾತ್ರೆಗಳಿಗೆ ತುಂಬಲು ಕಾರಣವೇನು?

ಪಾದರಸವು ಇತರೆ ಲೋಹಗಳೊಂದಿಗೆ ವರ್ತಿಸಿ ಅಮಾಲ್ಗಮ್ ಎಂಬ ಸಂಯುಕ್ತ ಉಂಟಾಗುತ್ತದೆ. ಆದರೆ ಪಾದರಸವು ಕಬ್ಬಿಣದ ಲೋಹದೊಂದಿಗೆ ವರ್ತಿಸಿದಾಗ ಅಮಾಲ್ಗಮ್ ಉಂಟಾಗುವುದಿಲ್ಲ. ಕಾರಣ, ಪಾದರಸದ ಸಾಂದ್ರತೆ (13.5g/cm3) ಕಬ್ಬಿಣದ ಸಾಂದ್ರತೆ (7.9g/cm3) ಗಿಂತ ಹೆಚ್ಚಾಗಿರುತ್ತದೆ. ಆದ್ದರಿಂದ ಕಬ್ಬಿಣದೊಂದಿಗೆ ಪಾದರಸವು ಅಮಾಲ್ಗಮ್ ಆಗಿ ಪರಿವರ್ತನೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪಾದರಸವನ್ನು ಕಬ್ಬಿಣದ ಪಾತ್ರೆಗಳಲ್ಲಿ ತುಂಬಿಡುತ್ತಾರೆ. ಪಾದರಸವು ಗಾಜಿನೊಂದಿಗೂ ಕೂಡ ವರ್ತಿಸುವುದಿಲ್ಲ. ಇತರೆ ಲೋಹದ ಪಾತ್ರೆಗಳಲ್ಲಿ ಪಾದರಸವನ್ನು ತುಂಬಿದರೆ ಅವುಗಳೊಂದಿಗೆ ಪಾದರಸ ವರ್ತಿಸುತ್ತದೆ.

Post a Comment

0 Comments