ದ್ರವರೂಪದ ಲೋಹ ಯಾವುದು?
ಪಾದರಸ (Mercury): ಪಾದರಸವು ಕೊಠಡಿಯ ಸಾಮಾನ್ಯ ತಾಪಮಾನದಲ್ಲಿ ದ್ರವರೂಪದ ಲೋಹವಾಗಿದೆ. ಇದು ಬೆಳ್ಳಿಯಂತೆ ಹೊಳೆಯುತ್ತದೆ. ಪಾದರಸವನ್ನು ಸಾಮಾನ್ಯವಾಗಿ ಕ್ವಿಕ್ ಸಿಲ್ವರ್ (Quick Silver) ಎನ್ನುವರು. ಇದು ಪ್ರಕೃತಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ. ಬದಲಿಗೆ ಅದಿರಿನ ರೂಪದಲ್ಲಿ ದೊರೆಯುತ್ತದೆ. ಪಾದರಸದ ಅದಿರು - ಸಿನಬಾರ್ (Cinabar)(Hgs), ಸಿಲಬಾರ್ನಲ್ಲಿ ಪಾದರಸದೊಂದಿಗೆ ಗಂಧಕವಿರುತ್ತದೆ. ಸಿನಬಾರ್ನಲ್ಲಿ ಪಾದರಸದೊಂದಿಗೆ ಗಂಧಕವಿರುತ್ತದೆ. ಪಾದರಸವನ್ನು ಸಿನಬಾರ್ ಅದಿರಿನಿಂದ ಇಂಗಾಲ-ಉತ್ಕೃಷ್ಟ ಕ್ರಿಯೆ (Carbon-Reduction Process) ಯಿಂದ ಪಡೆಯಲಾಗುತ್ತದೆ.
ಪಾದರಸದಿಂದ ಬರುವ ರೋಗ: ಮಿನಮಟ ರೋಗ (Minamata Disease)
- ಪಾದರಸ ವಿಷದಿಂದ ಮಿನಮಟ ರೋಗ ಬರುತ್ತದೆ. ಇದೊಂದು ಮಾಲಿನ್ಯ ರೋಗ.
- 1956ರಲ್ಲಿ ಜಪಾನಿನ ಮಿನಮಟ ನಗರದಲ್ಲಿ ದಾಖಲಾದ ಮಾಲಿನ್ಯ ರೋಗ
- ಮಿನಮಟ ರೋಗವು ಮಾನಸಿಕ ಅಸ್ವಸ್ಥತೆ ಉಂಟು ಮಾಡುತ್ತದೆ.
ಪಾದರಸದ ಉಪಯೋಗಗಳು (Uses Of Mercury): ಥರ್ಮೋಮೀಟರ್, ಬಾರೋಮೀಟರ್, ಸ್ಪಿಗ್ಮೊ ಮಾನೋಮೀಟರ್ಗಳಲ್ಲಿ ಬಳಕೆ, ಪಾದರಸ ಆವಿದೀಪ (Mercury Vapour Lamps) ಪ್ಲೊರೋಸೆಂಟ್ ಲ್ಯಾಂಪ್ಸ್, ಟ್ಯೂಬ್ಲೈಟ್ಸ್ (Hg ಅವಿ+ಆರ್ಗಾನ್), ಎಲೆಕ್ನಿಕಲ್ ಸಂಪರ್ಕದಲ್ಲಿ ಸಂಪರ್ಕ ದ್ರವವಾಗಿ ಬಳಕೆ, ಎಲ್ಸಿಡಿ ಸ್ಟ್ರೀನ್ ಬ್ಯಾಟರಿಗಳು, ಆಳತೆ ಮತ್ತು ನಿಯಂತ್ರಣ ಸಾಧನಗಳ ಬಳಕೆ, ವರ್ಮಿಲಿಯನ್ (Vermilion) (Mercuric Sulphide) ಅನ್ನು ತಯಾರಿಕೆಗೆ, ವರ್ಮಿಲಿಯನ್ ಅನ್ನು ಔಷಧಿ & ವಾಟರ್ ಕಲರಿಂಗ್ಗೆ ಬಳಕೆ ಮಾಡಲಾಗುತ್ತದೆ. ಪಾದರಸದ ಆಕ್ಸೆಡ್ ವರ್ಣದ್ರವ್ಯವಾಗಿ ಸೌಂದರ್ಯ ವರ್ಧಕಗಳಲ್ಲಿ & ಪರಿಮಳ ದ್ರವಗಳ ತಯಾರಿಕೆಯಲ್ಲಿ ಬಳಕೆ.
ಪಾದರಸವನ್ನು ಥರ್ಮೋಮೀಟರ್ನಲ್ಲಿ ಬಳಸಲು ಕಾರಣ: ಗಾಜಿಗೆ ಅಂಟಿಕೊಳ್ಳುವುದಿಲ್ಲ. ಕಾರಣ, ಪಾದರಸದ ಅಣುಗಳು ಸಂಸಕ್ತಿ ಬಲ (Cohesion Force) ವನ್ನು ಹೆಚ್ಚಾಗಿ ಹೊಂದಿದೆ. ಅಪಾರದರ್ಶಕವಾಗಿದ್ದು, ಹೊಳಪು ಹೊಂದಿದೆ, ಅದರ ಮಟ್ಟವನ್ನು ಸುಲಭವಾಗಿ ಪತ್ತೆ ಹಚ್ಚುವುದು, ಕಡಿಮೆ ವಿಶಿಷ್ಟೋಷ್ಣ (Specific Heat) ಹೊಂದಿದೆ. ಇದರ ಗ್ರಾಹೋಷ್ಣ ಕಡಿಮೆ ಇದ್ದು, ಸಣ್ಣ ವ್ಯತ್ಯಾಸಕ್ಕೂ ಪ್ರತಿಕ್ರಿಯೆ ನೀಡಬಲ್ಲದು. ಪಾದರಸವು ಒಳ್ಳೆಯ ಉಷ್ಣವಾಹಕವಾಗಿದ್ದು, ಸಂಪರ್ಕದ ವಸ್ತುಗಳು ಉಷ್ಣತೆಯನ್ನು ಶೀಘ್ರದಲ್ಲಿ ಗ್ರಹಿಸಬಲ್ಲದು, ದ್ರವ ರೂಪದ ಲೋಹವಾಗಿದ್ದು, -380 ಸೆಂಟಿಗ್ರೇಡ್ವರೆಗೂ (ಘನೀಕರಿಸುವ ಬಿಂದು) ಮತ್ತು 3560 ಸೆಂಟಿಗ್ರೇಡ್ವರೆಗೂ (ಕುದಿಯುವ ಬಿಂದು) ದ್ರವ ರೂಪದಲ್ಲಿರುತ್ತದೆ. ವಿಸ್ತರಣಾ ಗುಣಾಂಕವು (Co-Efficient of Expansion) ಹೆಚ್ಚಾಗಿದೆ.
0 Comments