ಸಾಬೂನಿನ ನೊರೆಯ ಮೇಲೆ ಬೆಳಕು ಬಿದ್ದಾಗ ವಿವಿಧ ಬಣ್ಣಗಳಲ್ಲಿ ಕಾಣಲು ಕಾರಣವೇನು?
ಬೆಳಕಿನ ವ್ಯತೀಕರಣ (Interference) ಪರಿಣಾಮದಿಂದ ತೆಳು ಸಾಬೂನಿನ ನೊರೆಯ ಮೇಲೆ ಬೆಳಕು ಬಿದ್ದಾಗ ವಿವಿಧ ಬಣ್ಣಗಳು ಕಾಣುತ್ತವೆ.
ವ್ಯತಿಕರಣಕ್ಕೆ ನಿದರ್ಶನಗಳು
ನೀರಿನ ಮೇಲೆ ಚೆಲ್ಲಲ್ಪಟ್ಟ ಸೀಮೆ ಎಣ್ಣೆಯು ವಿವಿಧ ಬಣ್ಣ ಕಾಣುವುದು.
ಮಳೆಹನಿ ಬಿದ್ದ ಟಾರು ರಸ್ತೆಯಲ್ಲಿ ಪೆಟ್ರೋಲ್ ಹನಿ ಬೆಳಕಿನಲ್ಲಿ ವಿವಿಧ ಬಣ್ಣಗಳಾಗಿ ಕಾಣುವುದು.
ವ್ಯತೀಕರಣ: ಅಂದರೆ ಒಂದು ಮಧ್ಯವರ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಅಲೆಗಳು ಏಕಕಾಲದಲ್ಲಿ ಹಾಯ್ದು ಹೋಗುವಾಗ, ಅವು ಸಂಪಾತವಾದ ಬಿಂದುವಿನಲ್ಲಿ ಅಲೆಗಳ ಶಕ್ತಿಯಲ್ಲಿ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ ಅಲೆಗಳ ಒಟ್ಟು ಶಕ್ತಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಅಲೆಗಳ ಸಂಪಾತದಲ್ಲಿ ಶಕ್ತಿಯ ಪುನರ್ ಹಂಚಿಕೆಯನ್ನು 'ವ್ಯತೀಕರಣ' ಎನ್ನುವರು.
ವ್ಯತೀಕರಣ (Interference)
ರಚನಾತ್ಮಕ ವ್ಯತೀಕರಣ (Constructive Interference):- ಅಲೆಗಳು ಸಂಪಾತವಾಗುವ ಬಿಂದುವಿನಲ್ಲಿ ಅಲೆಗಳ ಅವಸ್ಥೆ (Wavephase) ಒಂದೇ ಇದ್ದಲ್ಲಿ, ಅಲ್ಲಿ ಶಕ್ತಿ ಹೆಚ್ಚಾಗುತ್ತದೆ. ಇದನ್ನು ರಚನಾತ್ಮಕ ವ್ಯತೀಕರಣ ಎನ್ನುವರು.
ದಿನಾಶಿ ವ್ಯತೀಕರಣ (Destructive Interference):- ಅಲೆಗಳು ಸಂಪಾತವಾಗುವ ಬಿಂದುವಿನಲ್ಲಿ ಅಲೆಗಳ ಅವಸ್ಥೆ 180 ಡಿಗ್ರಿಯಷ್ಟು ವ್ಯತ್ಯಾಸವಾಗಿದ್ದಲ್ಲಿ, ಅಲ್ಲಿ ಶಕ್ತಿ ಕುಗ್ಗುತ್ತದೆ. ಆ ಬಿಂದುವಿನಲ್ಲಿ ವಿನಾಶಿ ವ್ಯತೀಕರಣವಾಗುತ್ತದೆ.
ಯಾವ ಸ್ವಾಭಾವಿಕ ವಿದ್ಯಮಾನವನ್ನು ಸಂಸ್ಕೃತದಲ್ಲಿ ಜಿಂಕೆಯ ಬಾಯಾರಿಕೆ (Deers Thirst) ಎಂದು ಕರೆಯುತ್ತಾರೆ?
ಮರೀಚಿಕೆಗಳನ್ನು ಸಂಸ್ಕೃತದಲ್ಲಿ ಜಿಂಕೆಯ ಬಾಯಾರಿಕೆ ಎಂದು ಕರೆಯುತ್ತಾರೆ. ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನದಿಂದ ಉಂಟಾಗುತ್ತವೆ.
.jpg)

0 Comments