ಎಲೆಕ್ಟ್ರಿಕ್ ಜನರೇಟರ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? | ಮಾನವನ ದೇಹದ ತೂಕ ಭೂಮಿಯ ವಿವಿಧ ಭಾಗಗಳಲ್ಲಿ ವ್ಯತ್ಯಾಸವಾಗುತ್ತದೆಯೇ?

ಎಲೆಕ್ಟ್ರಿಕ್ ಜನರೇಟರ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಎಲೆಕ್ಟ್ರಿಕ್ ಜನರೇಟರ್ಗಳು ಹೊರ ಸರ್ಕ್ಯೂಟ್ಗಳ ಬಳಕೆಗಾಗಿ ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿವೆ. ಎಲೆಕ್ಟ್ರಿಕ್ ಜನರೇಟರ್ಗಳ ಯಾಂತ್ರಿಕ ಶಕ್ತಿಯನ್ನು ಸ್ಟೀಮ್ ಟರ್ಬೈನ್ಸ್, ವಾಟರ್ ಟರ್ಬೈನ್ಸ್, ಅಂತರ್ದಹನ ಇಂಜಿನ್ಸ್ಗಳು, ವಿಂಟ್ ಟರ್ಬೈನ್ಸ್ಗಳ ಮೂಲಕ ಪಡೆಯಲಾಗುತ್ತದೆ. ಮೈಕಲ್ ಪ್ಯಾರೆಡೆ ಅವರು ಮೊಟ್ಟಮೊದಲ ಬಾರಿಗೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಜನರೇಟರ್ಗಳನ್ನು ಸಂಶೋಧಿಸಿದರು. ಎಲೆಕ್ಟ್ರಿಕ್ ಮೋಟರ್ಗಳು ವಿದ್ಯುಚ್ಛಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ.

ಮಾನವನ ದೇಹದ ತೂಕ ಭೂಮಿಯ ವಿವಿಧ ಭಾಗಗಳಲ್ಲಿ ವ್ಯತ್ಯಾಸವಾಗುತ್ತದೆಯೇ?

ಮಾನವನ ದೇಹದ ತೂಕವು ಧ್ರುವ (Poles) ಗಳಲ್ಲಿ ಹೆಚ್ಚಾಗಿರುತ್ತದೆ. ಕಾರಣ ಧ್ರುವಗಳಲ್ಲಿ ಗುರುತ್ವಾಕರ್ಷಣೆ ಹೆಚ್ಚಾಗಿರುತ್ತದೆ. ಭೂಮಿಯ ಸಮಭಾಜಕ ವೃತ್ತದಿಂದ ಧ್ರುವದ ಕಡೆಗೆ ಹೋದಂತೆ ಗುರುತ್ವಾಕರ್ಷಣೆ ಬಲ ಹೆಚ್ಚಾಗುತ್ತದೆ. ಗುರುತ್ವಾಕರ್ಷಣೆ ಹೆಚ್ಚಾದಂತೆ ತೂಕ ಹೆಚ್ಚಾಗುತ್ತದೆ. ಭೂಮಿಯ ಎಲ್ಲಾ ಸ್ಥಳಗಳಲ್ಲೂ ಗುರುತ್ವ ಒಂದೇ ಇರುವುದಿಲ್ಲ. ಚಂದ್ರನ ಮೇಲೆ ಮಾನವನ ತೂಕ ಕಡಿಮೆಯಾಗುತ್ತದೆ. ಚಂದ್ರನಲ್ಲಿ ಗುರುತ್ವವು ಭೂಮಿಯ ಗುರುತ್ವದ 1/6 (ಆರನೇ ಒಂದು ಭಾಗ) ಇರುತ್ತದೆ. ಆದುದ್ದರಿಂದ ಚಂದ್ರನಲ್ಲಿ ಮಾನವನ ತೂಕ ಕಡಿಮೆಯಾಗುತ್ತದೆ. ಆದರೆ ದ್ರವ್ಯರಾಶಿ (Mass) ಮಾತ್ರ ಒಂದೇ ಇರುತ್ತದೆ. ಆದುದ್ದರಿಂದ 1969 ಜುಲೈ 20 ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್  ಸ್ಟ್ರಾಂಗ್ ಅವರು ಚಂದ್ರನ ಮೇಲೆ ಪಾದವಿಡುವಾಗ ಬಾಹ್ಯಾಕಾಶ ನೌಕೆಯಿಂದ ಚಂದ್ರನ ಮೇಲೆ ಜಿಗಿದರು. ಕಾರಣ ಚಂದ್ರನಲ್ಲಿ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದಾಗಿ ಮಾನವನ ದೇಹದ ತೂಕವು ಕಡಿಮೆಯಾಗುತ್ತದೆ.

ವ್ಯಕ್ತಿಯ ತೂಕವು ಕೆನಡಾ ಮತ್ತು ಭಾರತದಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಅವನ ದ್ರವ್ಯರಾಶಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

Post a Comment

0 Comments