ಹಾಲು ದೇಹದಲ್ಲಿ ಹೇಗೆ ಪಚನವಾಗುತ್ತದೆ?

ಹಾಲಿನಲ್ಲಿ ಲ್ಯಾಕ್ಟೋಸ್ ಎಂಬ ಡೈಸ್ಯಾಕರೈಡ್ ಇರುತ್ತದೆ. ಲ್ಯಾಕ್ಟೋಸ್ ಗ್ಲೋಕೋಸ್ ಮತ್ತು ಗ್ಯಾಲೋಕ್ಟೋಸ್ ಎಂಬ ಮಾನೋಸ್ಯಾಕರೈಡ್ಗಳಿಂದ ಕೂಡಿದೆ. ಹಾಲಿನ ಪಚನವು ಜಠರದಲ್ಲಿ ಆರಂಭವಾಗುತ್ತದೆ. ಜಠರದಲ್ಲಿ ಉತ್ಪತ್ತಿಯಾಗುವ ಪೆಪ್ಪಿನ್ ಎಂಬ ಕಿಣ್ವವು ಹಾಲಿನಲ್ಲಿರುವ ಪ್ರೊಟೀನ್ನನ್ನು ಸಣ್ಣಸಣ್ಣ ತುಂಡುಗಳನ್ನಾಗಿಸುತ್ತದೆ. ನಂತರ ಸಣ್ಣ ಕರುಳಿನಲ್ಲಿ ಹಾಲಿನಲ್ಲಿರುವ ಕೊಬ್ಬು ಯಕೃತ್ ನಿಂದ ಬಿಡುಗಡೆಯಾದ ಬೈಲ್ ರಸದಿಂದ ಪಚನವಾಗಲು ಆರಂಭವಾಗುತ್ತದೆ. ಹಾಲಿನಲ್ಲಿರುವ ಪ್ರೋಟೀನ್ಗಳು ಸಣ್ಣಸಣ್ಣ ಪೆಪೈಡ್ ಮತ್ತು ಅಮೈನೋ ಆಮ್ಲವಾಗುತ್ತದೆ. ಹಾಗೂ ಹಾಲಿನ ಕೊಬ್ಬು ಡೈಗ್ಲಿಸರೈಡ್ಸ್, ಮಾನೋಗ್ಲಿಸರೈಡ್ಸ್ ಮತ್ತು ಮುಕ್ತ ಕೊಬ್ಬಿನ ಆಮ್ಲವಾಗುತ್ತದೆ. ಸಣ್ಣ ಕರುಳಿನಲ್ಲಿ ಉತ್ಪತ್ತಿಯಾದ ಕಿಣ್ವವು ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಮಾನೋಸ್ಯಾಕರೈಡ್ಗಳಾದ ಗ್ಲೋಕೋಸ್ ಮತ್ತು ಆಗಿ ಪರಿವರ್ತಿಸುತ್ತದೆ. ನಂತರ ಗ್ಲೋಕೋಸ್ ಮತ್ತು ಗ್ಯಾಲೋಕೋಸ್ಗಳು ಸಣ್ಣ ಕರುಳಿನಲ್ಲಿ ಹೀರಲ್ಪಡುತ್ತವೆ.

  • ಜಠರದಲ್ಲಿರುವ ರೆನಿನ್ ಕಿಣ್ವದ ಸಹಾಯದಿಂದ ಹಾಲು ಮೊಸರಾಗಿ ಪರಿವರ್ತನೆಯಾಗುತ್ತದೆ. ರೆನಿನ್ ಅನ್ನು ಕೈಮೋಸಿನ್ ಎಂದೂ ಕೂಡ ಕರೆಯುತ್ತಾರೆ. ಜಠರದಲ್ಲಿ ಉತ್ಪತ್ತಿಯಾಗುವ ಹೈಡೋಕ್ಲೋರಿಕ್ ಆಮ್ಲದ ಸಹಾಯದಿಂದ ರೆನಿನ್ ಹಾಲನ್ನು ಮೊಸರಾಗಿಸುತ್ತದೆ.
  • ಹಾಲಿನಲ್ಲಿರುವ ಕ್ಯಾಸಿನ್ ಎಂಬ ಪ್ರೊಟೀನ್ ಕೂಡ ರೆನಿನ್ ಎಂಬ ಎನ್ನಿಂದ ಪಚನವಾಗುತ್ತದೆ.

Post a Comment

0 Comments