ಇನ್ಫೋಸಿಸ್ ಪ್ರಶಸ್ತಿ
ಪ್ರಶಸ್ತಿ ನೀಡುವವರು: ಇನ್ಫೋಸಿಸ್ ಸೈನ್ಸ್ ಫೌಂಡೇಶನ್ (ಸ್ಥಾಪನೆ: 1981), ಕೇಂದ್ರ ಕಚೇರಿ: ಬೆಂಗಳೂರು.
ಪ್ರಶಸ್ತಿ ಮೊದಲ ಬಾರಿಗೆ ನೀಡಿದ್ದು: 2008 (ಮೊದಲ ಬಾರಿಗೆ ಗಣಿತಶಾಸ್ತ್ರ ವಿಭಾಗಕ್ಕೆ ಮಾತ್ರ - ಪ್ರೊ|| ಮಣೀಂದ್ರ ಅಗರ್ವಾಲ್) 2009 ರಿಂದ ಪ್ರಶಸ್ತಿ (5 ವಿಭಾಗಗಳು) ನೀಡಿಕೆ.
ಪ್ರಶಸ್ತಿ ನೀಡುವ ವಿಭಾಗಗಳು: 2012ರ ನಂತರ 6 ವಿಭಾಗಗಳು
- ಗಣಿತ ವಿಜ್ಞಾನ
- ಸಾಮಾಜಿಕ ವಿಜ್ಞಾನ
- ಜೀವ ವಿಜ್ಞಾನ
- ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ಸೈನ್ಸ್
- ಭೌತವಿಜ್ಞಾನ
- ಮಾನವಿಕ ವಿಭಾಗ (ಕೊನೆಯದಾಗಿ ಸೇರ್ಪಡೆ)
ಪ್ರಶಸ್ತಿಗೆ ಅರ್ಹತೆ: ಸಂಶೋಧನೆಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ 50 ವರ್ಷಕ್ಕಿಂತ ಒಳಗಿನವರನ್ನು ಪರಿಗಣಿಸಲಾಗುತ್ತದೆ.
ಪ್ರಶಸ್ತಿ ಮೊತ್ತ: ಕಳೆದ ವರ್ಷ ತಲಾ 65 ಲಕ್ಷ ರೂ. ನಗದು ಬಹುಮಾನ ನೀಡಲಾಗಿತ್ತು. ಈ ವರ್ಷ ಡಾಲರ್ ಎದುರು ಮೌಲ್ಯ ಹೆಚ್ಚಾಗಿರುವ ಕಾರಣ 72 ಲಕ್ಷ ರೂ. ನೀಡಲಾಗುತ್ತಿದೆ.
ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
ನೀಡುವವರು: “ವೈಜ್ಞಾನಿಕ & ಕೈಗಾರಿಕಾ ಸಂಶೋಧನಾ ಮಂಡಳಿ” (CSIR)
ಮೊದಲು ನೀಡಿಕೆ: 1958 (ಕೆ.ಎಸ್. ಕೃಷ್ಣನ್)
ಪ್ರಶಸ್ತಿಗೆ ಅರ್ಹತೆ: ಭಾರತೀಯ ನಾಗರೀಕತ್ವವನ್ನು ಹೊಂದಿರುವ 45 ವರ್ಷದೊಳಗಿನ ವಿಜ್ಞಾನಿಗಳು ವಿಜ್ಞಾನ & ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಸೇವೆ.
ಪ್ರಶಸ್ತಿ ಮೊತ್ತ: ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, 5 ಲಕ್ಷ ರೂ ನಗದು & ಜತೆಗೆ ಪ್ರಶಸ್ತಿ ಪುರಸ್ಕೃತರು ತಮ್ಮ 65 ವರ್ಷ ವಯಸ್ಸಿನವರೆಗೂ ಪ್ರತಿ ತಿಂಗಳು 15 ಸಾವಿರ ರೂಪಾಯಿ ಹಣ.
ಈ ಪ್ರಶಸ್ತಿ ಪ್ರದಾನ: ನವದೆಹಲಿಯ ವಿಜ್ಞಾನ ಭವನ
ಪ್ರಶಸ್ತಿ ನೀಡುವ ವಿಭಾಗಗಳು (7):
- ಜೀವ ವಿಜ್ಞಾನ,
- ರಸಾಯನ ವಿಜ್ಞಾನ,
- ಭೂಮಿ, ವಾಯುಮಂಡಲ, ಸಾಗರ, ಗ್ರಹಗಳ ವಿಜ್ಞಾನ,
- ಎಂಜಿನಿಯರಿಂಗ್ ವಿಭಾಗ,
- ಗಣಿತ ವಿಜ್ಞಾನ,
- ವೈದ್ಯಕೀಯ ವಿಜ್ಞಾನ ಮತ್ತು
- ಭೌತ ವಿಜ್ಞಾನ.
0 Comments