ಡಿಎನ್ಎ ಎಂದರೇನು?

  • ಡಿಎನ್ಎಯ ವಿಸ್ತೃತ ರೂಪ “ಡಿಆಕ್ಸಿ ರೈಬೋಸ್ ನ್ಯೂಕ್ಲಿಕ್ ಆಸಿಡ್" (Deoxyribose Nuclic Acid) ಡಿಎನ್ಎ ಯು ವರ್ಣ ತಂತುವಿನಲ್ಲಿರುವ ಅನುವಂಶೀಯ ವಸ್ತುವಾಗಿದೆ. ಅನುವಂಶೀಯ ಮಾಹಿತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತವೆ. ಡಿಎನ್ಎ ಹೆಚ್ಚು ಅಣುತೂಕದ ಒಂದು ಬೃಹತ್ ಅಣು, ಡಿಎನ್ಎ ಅಣು ಕೆಲವು ಸಸ್ಯ ವೈರಸ್ಗಳನ್ನು ಬಿಟ್ಟು ಉಳಿದೆಲ್ಲ ಜೀವಿಗಳಲ್ಲೂ ಇದೆ.
  • ಡಿಎನ್ಎ ಅಣು ಸುರುಳಿ ಸುತ್ತಿಕೊಂಡಿರುವ ಒಂದು ಏಣಿಯಂತಿದೆ. ಇದಕ್ಕೆ ದ್ವಿಸುರುಳಿ ಎನ್ನುವರು. ಡಿಎನ್ಎ ಸಂಶ್ಲೇಷಣೆಯನ್ನು ಪುನರಾವರ್ತನೆ (Replication) ಎಂದೂ ಕರೆಯುತ್ತಾರೆ.
  • ಡಿಎನ್ಎ ಅಣುವಿನಲ್ಲಿ ಒಂದು ಜೋಡಿ ಪಾಲಿ ನ್ಯೂಕ್ಲಿಯೋಟೈಡ್ನ ಸರಪಳಿಗಳಿವೆ. ಒಂದೊಂದು ಸರಪಳಿಯೂ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸಮಾನಾಂತರವಾಗಿ ನುಲಿದಿವೆ. ಈ ಸರಪಳಿಗಳು ಒಂದಕ್ಕೊಂದು ಹೆಣೆದುಕೊಂಡಿವೆ.
  • ಪಾಲಿನ್ಯೂಕ್ಲಿಯೋಟೈಡ್ನ ಒಂದೊಂದು ಸರಪಳಿಯಲ್ಲೂ ಅನೇಕ ನ್ಯೂಕ್ಲಿಯೋಟೈಡ್ನ ಘಟಕಗಳಿಂದಾಗಿವೆ. ಒಂದು ನ್ಯೂಕ್ಲಿಯೋಟೈಡ್ ಘಟಕವು ಮೂರು ಸಂಯುಕ್ತಗಳನ್ನು ಹೊಂದಿವೆ.
    • ಡಿಆಕ್ಸಿರೈಬೋಸ್ ಸಕ್ಕರೆ
    • ಫಾಸ್ಪೇಟ್
    • ನೈಟ್ರೋಜನ್ ಕ್ಷಾರಗಳು
  • ಡಿಆಕ್ಸಿ ರೈಬೋಸ್ ಸಕ್ಕರೆ ಪೆಂಟೋಸ್ ಸಕ್ಕರೆ (C5H10O5) ಡಿಎನ್ಎ ಏಣಿಯ ಎರಡು ಕಂಬಗಳು, ಪರ್ಯಾಯವಾಗಿ ಪೆಂಟೋಸ್ ಸಕ್ಕರೆ ಮತ್ತು ಪಾಸ್ಪೇಟ್ಗಳಿಂದ ಮಾಡಲಾಗಿದೆ.
  • ನೈಟ್ರೋಜನ್ ಕ್ಷಾರಗಳು ಎದರು ಬದರಿನ ಎರಡು ಕಂಬಗಳನ್ನು ಮೆಟ್ಟಿಲುಗಳಂತೆ ಸೇರಿಸುತ್ತವೆ.
  • 1) ಪ್ಯೂರಿನ್ (Purine), 2) ಪಿರಮಿಡಿನ್ ಎಂಬ ಎರಡು ರೀತಿ ನೈಟ್ರೋಜನ್ ಪ್ರತ್ಯಾಮ್ಲಗಳಿವೆ.
  • ಪ್ಯೂರಿನ್ಗಳಲ್ಲಿ ಆಡಿನಿನ್ (Adinine)(A), ಮತ್ತು ಗುವಾನಿನ್ (Guanine)(G) ಮತ್ತು ಪಿರಮಿಡ್ಗಳಲ್ಲಿ ಸೈಟೋಸಿನ್ ಮತ್ತು ಥೈಮೀನ್ (Thymine) ಗಳೆಂಬ ಎರಡು ಬಗೆಯ ಪ್ರತ್ಯಾಮ್ಲಗಳಿವೆ.
  • ಪಾಲಿನ್ಯೂಕ್ಲಿಯೋಟೈಡಿನ ಸರಪಳಿಯ ಪಿರಮಿಡಿನ ಇನ್ನೊಂದು ಪಾಲಿನ್ಯೂಕ್ಲಿಯೋಟೈಡ್ ಸರಪಳಿಯ ಪ್ಯೂರಿನ್ ಜೊತೆಯಾಗಿರುತ್ತದೆ. ಅಂದರೆ ಅಡಿನೈನ್ (A) ಯಾವಾಗಲೂ ಥೈಮಿನ್ ಜೊತೆಯಲ್ಲಿ, ಸೈಟೋಸಿನ್ (C) ಯಾವಾಗಲೂ ಗ್ವಾನಿನ್ ಜೊತೆಯಲ್ಲಿ ಜೋಡಣೆಯಾಗುತ್ತದೆ.
  • (A-T ಮತ್ತು G-C) ಇದಕ್ಕೆ ಪೂರಕ ಕ್ಷಾರ ಜೋಡಣೆ (Complementary Base Pairing) ಎಂದು ಹೆಸರು. ಆದ್ದ- ರಿಂದ ಡಿಎನ್ಎ ಅಣುವಿನ ಎರಡು ಎಳೆಗಳು ಒಂದಕ್ಕೊಂದು ಪೂರಕವಾಗಿರುತ್ತದೆಯೇ ಹೊರತು ತದ್ರೂಪವಾಗಿರುವುದಿಲ್ಲ.
  • ಆರ್.ಎನ್.ಎ:- ವಿಸ್ತ್ರತ ರೂಪ: ರೈಬೋಸ್ ನ್ಯೂಕ್ಲಿಕ್ ಆಸಿಡ್ಸ್: ಇದರಲ್ಲಿ ಸಾರಜನಕದ ಆಧಾರಗಳಾದ ಅಡಿನಿನ್, ಗುವಾನಿನ್, ಸೈಟೋಸಿನ್, ಯುರಾಸಿನ್, ಇರುತ್ತವೆ. ಡಿ.ಎನ್.ಎ ನಲ್ಲಿರುವ ಥಯಾಮೀನ್ ಬದಲಿಗೆ ಯುರಾಸಿಲ್ ಇರುತ್ತದೆ.
  • ಡಿಎನ್ಎ ಕರಗುವ ತಾಪಮಾನದಲ್ಲಿ ಮೂಲ ಹೆಲಿಕಲ್ ಡಿಎನ್ಎಯ ರಚನೆಯು ಬದಲಾಗುತ್ತದೆ.

Post a Comment

0 Comments