ಶೀತ ಪ್ರದೇಶದಲ್ಲಿ ತಾಪಮಾನವನ್ನು ಅಳೆಯಲು ಬಳಸುವ ಥರ್ಮೊಮೀಟರ್ನಲ್ಲಿ ಯಾವ ದ್ರವವನ್ನು ಬಳಸುತ್ತಾರೆ?
ಶೀತ ಪ್ರದೇಶದಲ್ಲಿ ತಾಪಮಾನವನ್ನಳೆಯುವ ಥರ್ಮೊಮೀಟರ್ಗಳಲ್ಲಿ ಆಲ್ಕೋಹಾಲ್ ಅನ್ನು ಕೂಡ ಬಳಸುತ್ತಾರೆ. ಆಲ್ಕೋಹಾಲ್ ಥರ್ಮೋಮೀಟರ್ನಲ್ಲಿ ಕನಿಷ್ಟ ಬಿಂದು –70 ಡಿಗ್ರಿ ಸೆಲ್ಸಿಯಸ್ ಬಳಸಬಹುದು. ಗರಿಷ್ಟ ಬಿಂದು +78 ಡಿಗ್ರಿ ಬಳಸಬಹುದು. ಅತೀ ಕಡಿಮೆ ತಾಪಮಾನವಿರುವ ಸಂದರ್ಭದಲ್ಲಿ ಆಲ್ಕೋಹಾಲಿನ ಥರ್ಮೋಮೀಟರ್ನ್ನು ಬಳಕೆ ಮಾಡುತ್ತಾರೆ. ಸಾಮಾನ್ಯವಾಗಿ ಬಳಕೆ ಮಾಡುವ ಆಲ್ಕೋಹಾಲ್ ಎಂದರೆ ಈಥೈಲ್ ಆಲ್ಕೋಹಾಲ್. ಈಥೈಲ್ ಆಲ್ಕೋಹಾಲಿನ ಘನೀಕರಣ ಬಿಂದು '-114.9 ಡಿಗ್ರಿ ಸೆ.', ಈಥೈಲ್ ಆಲ್ಕೋಹಾಲಿನ ಸೂತ್ರ: C2H5OH
ಥರ್ಮೊಪ್ಲಾಸ್ಕನಲ್ಲಿ ದ್ರವ ಪದಾರ್ಥಗಳು ಬಿಸಿಯಾಗಿರಲು ಕಾರಣವೇನು?
ಥರ್ಮೊಪ್ಲಾಸ್ಕ್ ನಾಳದಂತಿದ್ದು, ಎರಡು ಸೀಸೆಗಳನ್ನು ಒಳಗೊಂಡಿದೆ. ಹೊರ ಭಾಗದ ಸೀಸೆ ಮತ್ತು ಒಳಭಾಗದ ಸೀಸೆ ನಡುವೆ ಶೂನ್ಯ ಪದರವಿರುತ್ತದೆ. ಒಳ ಸೀಸೆಯಿಂದ ಉಷ್ಣವು ಪ್ರಚಲನ ಮೂಲಕ ಹೊರಕ್ಕೆ ಸಾಗುತ್ತದೆ. ಆದರೆ ಮಧ್ಯದಲ್ಲಿರುವ ಶೂನ್ಯ ಪದರವು ಒಳಸೀಸೆಯಿಂದ ಉಷ್ಣವು ಹೊರ ಹರಿಯುವುದನ್ನು ತಡೆ ಹಿಡಿಯುತ್ತದೆ. ಈ ಮೂಲಕ ಥರ್ಮೊಪ್ಲಾಸ್ಕಿನ ಒಳಪದರದಲ್ಲಿರುವ ಉಷ್ಣವು ನಷ್ಟವಾಗುವುದಿಲ್ಲ. ಈ ಕಾರಣದಿಂದಾಗಿ ಥರ್ಮೊಪ್ಲಾಸ್ಕಿನಲ್ಲಿ ಶೇಖರಿಸಲ್ಪಟ್ಟ ದ್ರವ ಪದಾರ್ಥವು ಬಹುಕಾಲದವರೆಗೆ ಬಿಸಿಯಾಗಿಯೇ ಇರುತ್ತದೆ. ಶೂನ್ಯ ಪದರವಿಲ್ಲದಿದ್ದರೆ ಒಳಪದರದಿಂದ ಹೊರಪದರಕ್ಕೆ ಶಾಖವು ಪಸರಿಸಿ ಬಿಸಿಯನ್ನು ಬೇಗ ಕಳೆದುಕೊಳ್ಳುತ್ತಿತ್ತು.
ವೈದ್ಯರು ಬಳಸುವ ಥರ್ಮೊಮೀಟರ್ (Thermo Meter) ಯಾವ ಸ್ಕೇಲ್ನಲ್ಲಿರುತ್ತದೆ?
ವೈದ್ಯರ ಬಳಿ ಇರುವ ಥರ್ಮೊಮೀಟರ್ ಫ್ಯಾರನ್ಹೀಟ್ ಮಾನದಿಂದ ಕೂಡಿದೆ. ವೈದ್ಯರ ಬಳಿ ಇರುವ ಫ್ಯಾರನ್ ಹೀಟ್ ಥರ್ಮೊಮೀಟರ್ನಲ್ಲಿ ಕನಿಷ್ಠ ಬಿಂದು 950 ಫ್ಯಾರನ್ ಹೀಟ್ ಆಗಿದ್ದು, ಗರಿಷ್ಠ 1100 ಫ್ಯಾರನ್ಹೀಟ್ ಇರುತ್ತದೆ. ಮನುಷ್ಯನ ದೇಹದ ಉಷ್ಣಾಂಶವು 98.40 ಫ್ಯಾರನ್ ಹೀಟ್ ಇದ್ದು, ಕಡಿಮೆ ಪ್ರಮಾಣದ ಬದಲಾವಣೆಗೆ ಒಳಪಡುತ್ತದೆ. ಆದುದ್ದರಿಂದ 950 ರಿಂದ 1100 ಫ್ಯಾರನ್ ಹೀಟ್ ಒಳಗೊಂಡ ಥರ್ಮೊಮೀಟರ್ ಅನ್ನು ವೈದ್ಯರು ಬಳಸುತ್ತಾರೆ.
.jpg)

0 Comments