ಚಂಡಮಾರುತ ಮಾಪಕ (ಸೈಕ್ಲೋನ್ ಸೂಚಕ) ದಲ್ಲಿ ಪಾದರಸವು ತಕ್ಷಣ ಮೇಲೆ ಕೆಳಗೆ ಇಳಿಯುವುದು ಏನನ್ನು ಸೂಚಿಸುತ್ತದೆ? | ಪಾದರಸವನ್ನೇಕೆ ಉಷ್ಣತಾಮಾಪಕಗಳಲ್ಲಿ ಬಳಸುತ್ತಾರೆ?

ಚಂಡಮಾರುತ ಮಾಪಕ (ಸೈಕ್ಲೋನ್ ಸೂಚಕ) ದಲ್ಲಿ ಪಾದರಸವು ತಕ್ಷಣ ಮೇಲೆ ಕೆಳಗೆ ಇಳಿಯುವುದು ಏನನ್ನು ಸೂಚಿಸುತ್ತದೆ?

ಚಂಡಮಾರುತ ಸೂಚಕದಲ್ಲಿ ಪಾದರಸದ ಮಟ್ಟವು ತಕ್ಷಣ ಕೆಳಗೆ ಇಳಿಯುವುದು ಚಂಡಮಾರುತ ಸಂಭವಿಸುವುದನ್ನು ಸೂಚಿಸುತ್ತದೆ. ಈ ಚಂಡಮಾರುತದ ಮುನ್ನೆಚ್ಚರಿಕೆಗಳನ್ನು ಮೊದಲೇ ನೀಡಲಾಗುತ್ತದೆ.

ಪಾದರಸವನ್ನು ವಾಯುಭಾರ ಮಾಪಕದಲ್ಲಿ ಬಳಸುವ ಉದ್ದೇಶವೇನು?

ವಾಯುಭಾರ ಮಾಪಕದಲ್ಲಿ ಪಾದರಸವನ್ನು ಬಳಸಲು ಪ್ರಮುಖ ಕಾರಣ, ಇದು ಸಮುದ್ರ ಮಟ್ಟದಲ್ಲಿ 76 ಸೆಂ.ಮೀ. ಇರುತ್ತದೆ. ಪಾದರಸಕ್ಕೆ ಬದಲಾಗಿ ನೀರನ್ನು ಬಳಸಿದ್ದರೆ ಈ ಎತ್ತರ 76X13.6 ಸೆಂ.ಮೀ. ಇರುತ್ತಿತ್ತು. ಏಕೆಂದರೆ, ನೀರು ಪಾದರಸಕ್ಕಿಂತ 13.6 ರಷ್ಟು ಸಾಂದ್ರತೆಯಲ್ಲಿ ಹಗುರವಾಗಿರುತ್ತದೆ. ಸಮುದ್ರ ತೀರದಲ್ಲಿ ವಾಯುಮಂಡಲದ ಒತ್ತಡ 76 ಸೆಂ.ಮೀ. ಇದ್ದು, ಪಾದರಸದ ಮಟ್ಟ 76 ಸೆಂ.ಮೀ. ಇರುತ್ತದೆ. ಬೆಂಗಳೂರು ಸಮುದ್ರ ಮಟ್ಟಕ್ಕಿಂತ ಎತ್ತರವಾಗಿದ್ದು, ವಾಯುಭಾರ ಮಾಪಕದಲ್ಲಿ ಪಾದರಸದ ಮಟ್ಟ 68 ಸೆಂ.ಮೀ. ಇರುತ್ತದೆ.

ಪಾದರಸದ ಎಲೆಕ್ಟ್ರಾನಿಕ್ ವಿನ್ಯಾಸ ಹೇಗೆ ಬರೆಯಬಹುದು?

ಪಾದರಸದ ಪರಮಾಣು ಸಂಖ್ಯೆಯು 80 ಇದೆ. ಇದನ್ನು ಎಲೆಕ್ಟ್ರಾನಿಕ್ ವಿನ್ಯಾಸ ಹೀಗೆ ಬರೆಯಬಹುದು: 1S2, 2S2, 2P6, 3S2, 3P6, 3d10, 4S2, 4P6, 4d10, 4f14, 5S2, 5P6, 5d10, 6S2.

ಥರ್ಮೊಮೀಟರ್ಗಳಲ್ಲಿ ಪಾದರಸವಲ್ಲದೆ ಬೇರೆ ಯಾವ ದ್ರವ ಬಳಸಲಾಗುತ್ತದೆ?

ಥರ್ಮೊಮೀಟರ್ಗಳಲ್ಲಿ ಸಾಮಾನ್ಯವಾಗಿ ಪಾದರಸವನ್ನು ಬಳಸುತ್ತಾರೆ. ಆದರೆ, ಅತೀ ಕಡಿಮೆ ತಾಪಮಾನವಿರುವ ಶೀತಪ್ರದೇಶಗಳಲ್ಲಿ ಆಲ್ಕೋಹಾಲ್ ಅನ್ನು ಬಳಸುತ್ತಾರೆ. ಇಂತಹ ಆಲ್ಕೋಹಾಲ್ ಥರ್ಮೊಮೀಟರ್ಗಳಲ್ಲಿ ಕನಿಷ್ಠ ಬಿಂದು -700 ಸೆಲ್ಸಿಯಸ್ನಲ್ಲಿ ಬಳಸಬಹುದು. ಸಾಮಾನ್ಯವಾಗಿ ಬಳಕೆ ಮಾಡುವ ಆಲ್ಕೋಹಾಲ್ ಎಂದರೆ, ಈಥೈಲ್ ಆಲ್ಕೋಹಾಲ್: ಈಥೈಲ್ ಆಲ್ಕೋಹಾಲ್ ಅನ್ನು ಘನೀಕರಿಸುವ ಬಿಂದು -114.90 ಸೆಲ್ಸಿಯಸ್ ಇರುತ್ತದೆ. ಇದನ್ನು ಸ್ಪಿರಿಟ್ ಥರ್ಮೊಮೀಟರ್ (SPIRIT THERMOMETER) ಎಂದೂ ಸಹ ಕರೆಯುತ್ತಾರೆ.

ಪಾದರಸವನ್ನೇಕೆ ಉಷ್ಣತಾಮಾಪಕಗಳಲ್ಲಿ ಬಳಸುತ್ತಾರೆ?

ಉಷ್ಣತಾಮಾಪಕಗಳಲ್ಲಿ ಪಾದರಸವನ್ನು ಬಳಸಲು ಅನೇಕ ಕಾರಣಗಳಿವೆ.

  • ಪಾದರಸವು ಗಾಜಿಗೆ ಅಂಟಿಕೊಳ್ಳುವುದಿಲ್ಲ.
  • ಗಾಜಿನಲ್ಲಿ ಪಾದರಸವು ಅಪಾರದರ್ಶಕ ವಸ್ತುವಾಗಿದ್ದು, ಅದರ ಮಟ್ಟವನ್ನು ಸುಲಭವಾಗಿ ಗುರುತಿಸಬಹುದು.
  • ಇದು ಗ್ರಾಹ್ಯೋಷ್ಣ (Specific Heat) ಕಡಿಮೆ ಇದ್ದು, ಸಣ್ಣ ವ್ಯತ್ಯಾಸಕ್ಕೂ ಪ್ರತಿಕ್ರಿಯಿಸಬಲ್ಲದು.
  • ಪಾದರಸವು ದ್ರವರೂಪದಲ್ಲಿದ್ದು, -38 ಡಿಗ್ರಿ ಸೆಲ್ಸಿಯಸ್ ವರೆಗೂ ಘನವಾಗದೇ, 356 ಡಿಗ್ರಿ ಸೆಲ್ಸಿಯಸ್ವರೆಗೂ ಅನಿಲವಾಗದೇ ದ್ರವರೂಪದಲ್ಲೇ ಇರುತ್ತದೆ. (ಪಾದರಸದ ಘನೀಕರಿಸುವ ಬಿಂದು (Freezing Point) -38.83 ಡಿಗ್ರಿ ಸೆಂಟಿಗ್ರೇಡ್ ಆಗಿದ್ದು ಕುದಿಯುವ (Boiling Point) ಬಿಂದು 356.73 ಡಿಗ್ರಿ ಸೆಲ್ಸಿಯಸ್ ಇರುತ್ತದೆ.)
  • ಪಾದರಸವು ಹೊಳಪು ಹೊಂದಿದೆ. ಪಾದರಸವು ಶುದ್ಧರೂಪದಲ್ಲಿದೆ.
  • ಇದರ ಗಾತ್ರದಲ್ಲಿ ಸರಳ ವ್ಯತ್ಯಾಸವಾಗುವುದು. (ಉಷ್ಣತಾ ವ್ಯತ್ಯಾಸದಿಂದ) (Co-efficient of Expansion is Uniform)
  • ಸುತ್ತಮುತ್ತಲಿನ ಸಣ್ಣ ಬದಲಾವಣೆಗೆ ಸ್ಪಂದಿಸುತ್ತದೆ.

Post a Comment

0 Comments