ಕಬ್ಬಿಣವು ಪಾದರಸದಲ್ಲಿ ತೇಲುತ್ತದೆ, ಆದರೆ ನೀರಿನಲ್ಲಿ ಮುಳುಗುತ್ತದೆ ಕಾರಣವೇನು? | ಪಾದರಸವು ಆದಿ ವಾಹಕತ್ವವನ್ನು ಹೊಂದುವಂತೆ ಹೇಗೆ ಮಾಡಬಹುದು?

ಕಬ್ಬಿಣವು ಪಾದರಸದಲ್ಲಿ ತೇಲುತ್ತದೆ, ಆದರೆ ನೀರಿನಲ್ಲಿ ಮುಳುಗುತ್ತದೆ ಕಾರಣವೇನು?

ಕಬ್ಬಿಣವು ಪಾದರಸದಲ್ಲಿ ತೇಲುತ್ತದೆ ಕಾರಣ ಕಬ್ಬಿಣದ ಸಾಂದ್ರತೆಯು ಪಾದರಸದ ಸಾಂದ್ರತೆಗಿಂತ ಕಡಿಮೆ ಇರುತ್ತದೆ. ಕಬ್ಬಿಣದ ಸಾಂದ್ರತೆಯು 7.86 g/cm3 ಆಗಿದ್ದು, ಪಾದರಸದ ಸಾಂದ್ರತೆಯು 13.53g/cm3 ಆಗಿದೆ. ಆದರೆ ಚಿನ್ನವು ಪಾದರಸದಲ್ಲಿ ಮುಳುಗುತ್ತದೆ. ಚಿನ್ನದ ಸಾಂದ್ರತೆ 19.3 g/cm3 ಆಗಿದ್ದು, ಪಾದರಸದ ಸಾಂದ್ರತೆಗಿಂತ ಹೆಚ್ಚಾಗಿದೆ. ಬೆಳ್ಳಿಯು ಪಾದರಸದಲ್ಲಿ ತೇಲುತ್ತದೆ. ಕಾರಣ, ಪಾದರಸದ ಸಾಂದ್ರತೆಗಿಂತ ಬೆಳ್ಳಿಯ ಸಾಂದ್ರತೆಯು ಕಡಿಮೆ ಇದೆ.

ಪಾದರಸವು ಆದಿ ವಾಹಕತ್ವವನ್ನು ಹೊಂದುವಂತೆ ಹೇಗೆ ಮಾಡಬಹುದು?

ಯಾವುದೇ ಒಂದು ಲೋಹದ ವಾಹಕತ್ವವು ಹೆಚ್ಚಾಗಬೇಕಾದರೆ ಅದರ ರೋಧತ್ವವು ಕಡಿಮೆಯಾಗಬೇಕಾಗುತ್ತದೆ. ಒಂದು ನಿಗದಿತ ಉಷ್ಣಾಂಶಕ್ಕಿಂತ ಕಡಿಮೆ ಮಾಡಿದಾಗ ವಾಹಕದಲ್ಲಿ ರೋಧತ್ವವು ಕಡಿಮೆಯಾಗಿ ವಾಹಕತ್ವವು ಹೆಚ್ಚಾಗುತ್ತದೆ. ಅದೇ ರೀತಿ ಪಾದರಸದ ಉಷ್ಣಾಂಶವನ್ನು 4.2 ಕೆಲ್ವಿನ್ಗಿಂತ ಕಡಿಮೆ ಮಾಡಿದಾಗ ಅದರಲ್ಲಿ ರೋಧತ್ವವು ಕಡಿಮೆಯಾಗಿ ವಾಹಕತ್ವವು ಹೆಚ್ಚಾಗುತ್ತದೆ. ಆಗ ಆ ಪಾದರಸವು ಆದಿ ವಾಹಕತ್ವ (Super Conductivity) ಗುಣವನ್ನು ಹೊಂದುತ್ತದೆ. ಅನೇಕ ಲೋಹಗಳನ್ನು ಆದಿವಾಹಕತ್ವ ಗುಣ ಹೊಂದುವಂತೆ ಮಾಡಲು ನಿಗದಿತ ಉಷ್ಣಾಂಶಕ್ಕಿಂತ ಕಡಿಮೆ ಮಾಡಿದಾಗ ವಾಹಕತ್ವವು ಹೆಚ್ಚಾಗಿ ಅವುಗಳು ಗುಣವನ್ನು ಹೊಂದುತ್ತವೆ. ಸಾಮಾನ್ಯವಾಗಿ ಲೋಹಗಳನ್ನು ಅತಿ ಕಡಿಮೆ ಅಂದರೆ –0 ಡಿಗ್ರಿ ಸೆಲ್ಸಿಯಸ್ ಅಥವಾ -273.15 ಡಿಗ್ರಿ ಕೆಲ್ವಿನ್ನಷ್ಟು ಅಥವಾ -459.67 ಫ್ಯಾರನ್ ಹೀಟ್ ಉಷ್ಣಾಂಶದಷ್ಟು ತಂದಾಗ ಅಂತಹ ಉಷ್ಣಾಂಶದಲ್ಲಿ ವಾಹಕವು ಅದಿ ವಾಹಕತ್ವವನ್ನು ಹೊಂದುತ್ತವೆ.

Post a Comment

0 Comments