ಅಲ್ಬರ್ಟ್ ಐನ್ ಸ್ಟೀನ್ ರವರ ಪರಿಚಯ

ಸಾಪೇಕ್ಷವಾದದ ಪ್ರತಿಪಾದಕ ಅಲ್ಬರ್ಟ್ ಐನ್ ಸ್ಟೀನ್ ರವರು ಎಲ್ಲಾ ಕಾಲಕ್ಕೂ ಪ್ರಸಿದ್ಧರಾದ ವಿದ್ವಾಂಸ, ಮೇಧಾವಿ. ಇವರು ಆಧುನಿಕ ಭೌತಶಾಸ್ತ್ರದ ಪಿತಾಮಹರಲೊಬ್ಬರು. ಇವರು ಸೈದ್ಧಾಂತಿಕ ಭೌತಶಾಸ್ತ್ರ ಹಾಗೂ ವಿಶೇಷವಾಗಿ ದ್ಯುತಿ ವಿದ್ಯುತ್ ಪರಿಣಾಮ (Photoelectric Effect) ದ ಸಂಶೋಧನೆಗಾಗಿ ‘1921ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ' ಪಡೆದರು.

ಐನ್ ಸ್ಟೀನ್ ರವರು ತರುಣನಾಗಿದ್ದಾಗ ಒಬ್ಬ ಸಾಮಾನ್ಯ ಗುಮಾಸ್ತನಾಗಿದ್ದರು. ಇವರು ಗಣಿತದಲ್ಲಿ ನಡೆಸಿದ ಪ್ರಯೋಗಗಳು ಭೌತಶಾಸ್ತ್ರದಲ್ಲಿ ಅದ್ಭುತ ಸಾಧನೆಗೆ ದಾರಿ ಮಾಡಿಕೊಟ್ಟವು. ಐನ್ ಸ್ಟೀನ್ ರವರು ಸಾಪೇಕ್ಷವಾದ ಎಂಬ ಹೆಸರಿನಲ್ಲಿ ಮಂಡಿಸಿದ ಸಿದ್ದಾಂತವು “ಗುರುತ್ವ ಶಕ್ತಿ”ಯ ಬಗ್ಗೆ ಅಲ್ಲಿಯವರೆಗೆ ಬಂದಿದ್ದ ನಿರ್ಧಾರಗಳನ್ನು ತಿದ್ದಿಕೊಳ್ಳುವಂತೆ ಮಾಡಿತು.

ರಾಶಿ (mass)ಯುಳ್ಳ ಪ್ರತಿಯೊಂದು ವಸ್ತುವು ತನ್ನ ಸುತ್ತ ಗುರುತ್ವ ಕ್ಷೇತ್ರವನ್ನು ನಿರ್ಮಿಸುತ್ತದೆ ಎಂದು ತೋರಿಸಿದರು. ಪ್ರಥಮ ಪರಮಾಣು ಬಾಂಬುವಿನ ಪ್ರಯೋಗದ ಹಿಂದೆ ಐನ್ಸ್ಟೀನ್ರವರ ಜ್ಞಾನ ಹಾಗೂ ಕೊಡುಗೆ ಇದೆ. ಅವರು ಮಂಡಿಸಿದ 300ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನೆಗಳು ಅಪೂರ್ವ ಕ್ರಾಂತಿಯನ್ನು ಉಂಟುಮಾಡಿದೆ. ಈತ ಜರ್ಮನಿಯಲ್ಲಿ ಜನಿಸಿದ್ದರು, ದೀರ್ಘಕಾಲ ಕೆಲಸ ನಡೆಸಿದ್ದರೂ, ಹಿಟ್ಲರ್ನ ವರ್ಣಭೇದ ನೀತಿಯನ್ನು ಸಹಿಸಲಾರದೆ ತನ್ನ ದೇಶವನ್ನು ಬಿಟ್ಟು, ಯು.ಎಸ್ನ ಆಶ್ರಯ ಪಡೆದು ಉಳಿದ ಅವಧಿಯಲ್ಲಿ ಅಲ್ಲೇ ಸಂಶೋಧನೆ ನಡೆಸಿ ಜಗದ್ವಿಖ್ಯಾತವಾದರು. ಅಮೆರಿಕಾದಲ್ಲಿಯೇ ಅನಾರೋಗ್ಯದಿಂದ ಐನ್ ಸ್ಟೀನ್ ಕೊನೆಯುಸಿರೆಳೆದರು.

Post a Comment

0 Comments