ಪಾಸ್ಕಲ್ನ ನಿಯಮವೇನು?
1650ರಲ್ಲಿ ಪಾಸ್ಕಲ್ ಎಂಬ ಫ್ರೆಂಚ್ ವಿಜ್ಞಾನಿ “ವಿಶ್ರಾಂತಿಯಲ್ಲಿರುವ ದ್ರವದ ಯಾವುದಾದರೂ ಒಂದು ಬಿಂದುವಿನಲ್ಲಿ ಒತ್ತಡ ಎಲ್ಲಾ ದಿಕ್ಕಿನಲ್ಲಿಯೂ ಒಂದೇ ಸಮವಾಗಿರುತ್ತದೆ” ಎಂದು ಕಂಡುಹಿಡಿದರು. ಇದನ್ನು ದ್ರವದ ಒತ್ತಡದ ಪ್ರಸಾರದ ಪಾಸ್ಕಲ್ ನಿಯಮ ಎನ್ನುವರು. ಹೆಚ್ಚು ಆಳದಲ್ಲಿರುವ ಬಿಂದುವಿನಲ್ಲಿ ಒತ್ತಡ ಹೆಚ್ಚಾಗಿರುತ್ತದೆ & ಸಮವಾಗಿರುತ್ತದೆ. ದ್ರವದ ಒಂದು ಬಿಂದುವಿನ ಒತ್ತಡವು ದ್ರವದ ಮೇಲ್ಮೈಯಿಂದ ಬಿಂದುವು ಇರುವ ಆಳ & ದ್ರವದ ಸಾಂದ್ರತೆಗಳನ್ನು ಅವಲಂಬಿಸಿರುತ್ತದೆ. ಒತ್ತಡವನ್ನು ಅಳೆಯುವ ಅಂತರಾಷ್ಟ್ರೀಯ ಮಾನ ಪಾಸ್ಕಲ್.
ಹೈಡ್ರಾಲಿಕ್ ಇಂಜಿನ್ (Hydraulic Engines ) ಗಳು ಯಾವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ?
ಹೈಡ್ರಾಲಿಕ್ ಇಂಜಿನ್ಸ್ ಒತ್ತಡದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಹೈಡ್ರಾಲಿಕ್ ಜಾಕ್ಸ್, ಹೈಡ್ರಾಲಿಕ್ ಬ್ರೇಕ್ಸ್, ಕ್ರೇನ್ಸ್ ಗಳು ಜೆಸಿಬಿಗಳಲ್ಲಿ ಹೈಡ್ರಾಲಿಕ್ ಇಂಜಿನ್ಸ್ ಗಳು ಹೆಚ್ಚು ಬಳಕೆಯಲ್ಲಿವೆ. ಹೈಡ್ರಾಲಿಕ್ ಇಂಜಿನ್ ನಲ್ಲಿ ಒತ್ತಡವು ಮೂಲಭೂತ ಶಕ್ತಿಯಾಗಿದೆ.
ವಿಮಾನದಲ್ಲಿ ಪ್ರಯಾಣಿಸುವಾಗ ಪೆನ್ನಿನ ಇಂಕು ಹೊರಚೆಲ್ಲಲು ಕಾರಣವೇನು?
ವಿಮಾನದಲ್ಲಿ ಪ್ರಯಾಣಿಸುವಾಗ ಪೆನ್ನಿನಲ್ಲಿರುವ ಇಂಕು ಹೊರಚೆಲ್ಲಲು ಕಾರಣ, ಪೆನ್ನಿನೊಳಗೆ ಒತ್ತಡವು ಸುತ್ತಲಿನ ಒತ್ತಡಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೆನ್ನಿನ ಇಂಕು ಹೊರಚೆಲ್ಲುತ್ತದೆ.
ಫೌಂಟೇನ್ ಪೆನ್ ಅನ್ನು ಕಂಡುಹಿಡಿದವರು ಲೇವಿಸ್ ವಾಟರ್ನ್ (Lewis Waterman). ಫೌಂಟೇನ್ ಪೆನ್ನು ಲೋಮನಾಳ ಕ್ರಿಯೆಯ ತತ್ವದ ಮೇಲೆ ಕೆಲಸ ಮಾಡುತ್ತದೆ.
ಲೀಥಿಯಂ ರಿಚಾರ್ಜಬಲ್ ಕೋಶಗಳ (ಬ್ಯಾಟರಿ) ನ್ನು ಎಲ್ಲಿ ಬಳಸಲಾಗುತ್ತದೆ?
ಲೀಥಿಯಂ ಕೋಶಗಳನ್ನು ಕ್ವಾರ್ಟ್ಜ್ ವಾಚ್ ಗಳಲ್ಲಿ ಬಳಸಲಾಗುತ್ತದೆ.
ಅಲ್ಲದೆ ಇವುಗಳನ್ನು ಮೊಬೈಲ್ ಗಳಲ್ಲೂ ಕೂಡ ಬಳಸುತ್ತಾರೆ. ಇವುಗಳ ಬಾಳಿಕೆ ಅವಧಿ 10 ವರ್ಷಗಳಾಗಿದ್ದು, ಇವುಗಳು 1.5 ವೋಲ್ಟ್ ನಿಂದ 3.7 ವೋಲ್ಟ್ ವರೆಗೆ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಇತ್ತೀಚೆಗೆ ಹೆಚ್ಚು ಲೀಥಿಯಂ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವು ಒಂದು ರೀತಿಯ ಎಲೆಕ್ಟ್ರೋ ಕೆಮಿಕಲ್ (ವಿದ್ಯುತ್ ರಾಸಾಯನಿಕ) ಕೋಶಗಳಾಗಿವೆ.
ಕೃತಕ ಉಪಗ್ರಹದಲ್ಲಿ ಕುಳಿತ ವ್ಯಕ್ತಿಯ ತೂಕದ ಪರಿಣಾಮವೇನು?
ಕೃತಕ ಉಪಗ್ರಹದಲ್ಲಿ ಕುಳಿತ ವ್ಯಕ್ತಿಯ ತೂಕವು ಶೂನ್ಯವಾಗಿರುತ್ತದೆ. ಕಾರಣ ಕೃತಕ ಉಪಗ್ರಹದಲ್ಲಿ ಗುರುತ್ವ ಶಕ್ತಿಯು ಶೂನ್ಯವಾಗಿರುವುದರಿಂದ ತೂಕವೂ ಕೂಡ ಶೂನ್ಯವಾಗಿರುತ್ತದೆ. ಗುರುತ್ವಕ್ಕೂ ಮತ್ತು ತೂಕಕ್ಕೂ ಸಂಬಂಧವಿದೆ. ಗುರುತ್ವಾಕರ್ಷಣೆ ಹೆಚ್ಚಾದಾಗ ವಸ್ತುವಿನ ತೂಕ ಹೆಚ್ಚಾಗುತ್ತದೆ. ಭೂಮಿಯ ಮೇಲಿರುವ ವಸ್ತುಗಳಿಗೆ ತೂಕವಿರಲು ಕಾರಣ ಭೂಮಿಯ ಗುರುತ್ವಾಕರ್ಷಣ ಬಲ, ಬಾಹ್ಯಾಕಾಶದಲ್ಲಿ ಯಾವುದೇ ಗುರುತ್ವ ಇಲ್ಲದಿರುವುದರಿಂದ ತೂಕವು ಶೂನ್ಯವಾಗಿರುತ್ತದೆ.
ದಿಕ್ಸೂಚಿಯಲ್ಲಿರುವ ಯಾವ ದಿಕ್ಕಿನ ಸೂಚಿಗೆ ಕೆಂಪುಬಣ್ಣವನ್ನು ಬಳಿದಿರುತ್ತಾರೆ?
ನಾವಿಕರು ಬಳಸುವ ದಿಕ್ಸೂಚಿಯಲ್ಲಿ ಕೆಂಪು ಬಣ್ಣವನ್ನು ಉತ್ತರ ದಿಕ್ಕಿಗೆ ಬಳಿದಿರುತ್ತಾರೆ. ಈ ಮೂಲಕ ಉತ್ತರ ದಿಕ್ಕನ್ನು ಪತ್ತೆಹಚ್ಚುವ ಮೂಲಕ ಉಳಿದ ದಿಕ್ಕುಗಳನ್ನು ಸಮರ್ಪಕವಾಗಿ ಪತ್ತೆಹಚ್ಚಬಹುದು. ದಿಕ್ಸೂಚಿಯನ್ನು ಮೊದಲು ಸಂಶೋಧಿಸಿದರು ಚೀನಿಯರು.
ಯಾವ ಬಣ್ಣವು ಅತಿ ಹೆಚ್ಚಿನ ಶಕ್ತಿ ಹೊಂದಿದೆ?
ನೀಲಿ ಬಣ್ಣವು ಅತಿ ಕಡಿಮೆ ತರಂಗ ದೂರವನ್ನು ಹೊಂದಿದ್ದು, ಆವರ್ತನ ಸಂಖ್ಯೆಯು ಹೆಚ್ಚು ಹೊಂದಿರುತ್ತದೆ. ಆದುದ್ದರಿಂದ ಇದು ತೀಕ್ಷ್ಣವಾದ ಶಕ್ತಿಯುತ ಬಣ್ಣವಾಗಿದೆ. ಕೆಂಪು ಬಣ್ಣವು ಕಡಿಮೆ ತೀಕ್ಷ್ಣತೆಯನ್ನು ಹೊಂದಿರುವ ಬಣ್ಣವಾಗಿದ್ದು, ಇದರ ತರಂಗದೂರ (Wave Length) ವು ಅತಿ ಉದ್ದವಾಗಿದ್ದು, ಆವರ್ತನ ಸಂಖ್ಯೆ (Frequency) ಯು ಕಡಿಮೆ ಇರುತ್ತದೆ.
0 Comments