ರಾಕೆಟ್ ಉಡಾವಣೆಯು ನ್ಯೂಟನ್ ನ ಮೂರನೇ ಚಲನಾ ನಿಯಮವನ್ನು ಆಧರಿಸಿದೆ. ರಾಕೆಟ್ ಉಡಾವಣೆಯಲ್ಲಿ ಕೆಳಮುಖವಾಗಿ ಚಿಮ್ಮುವ ಹೊಗೆಯು ಎಷ್ಟು ಬಲದೊಂದಿಗೆ ಚಿಮ್ಮುವುದೋ ಅಷ್ಟೆ ಬಲದೊಂದಿಗೆ ರಾಕೆಟ್ ಮೇಲೆರುವುದು.
ನ್ಯೂಟನ್ ಮೂರನೇ ನಿಯಮ “ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮನಾಗಿದ್ದು ಒಂದಕ್ಕೊಂದು ವಿರುದ್ಧ ನೇರಗಳಲ್ಲಿ ನೆರವೇರುವವು”.
ನ್ಯೂಟನ್ ಮೂರನೇ ತತ್ವವನ್ನಾಧರಿಸಿರುವ ಇತರೆ ಚಟುವಟಿಕೆಗಳೆಂದರೆ
1) ಬಂದೂಕದ ಗುಂಡು ಮುಂದಕ್ಕೆ ಹಾರಿದಂತೆ ಬಂದೂಕು ಹಿಂದಕ್ಕೆ ಒದೆಯಲ್ಪಡುವುದು.
2) ರೆಕ್ಕೆಗಳೊಂದಿಗೆ ಪಕ್ಷಿಗಳು ಗಾಳಿಯನ್ನು ಹಿಂದಕ್ಕೆ ತಳ್ಳಿದ ಬಲದೊಂದಿಗೆ ಪಕ್ಷಿಗಳು ಮುಂದಕ್ಕೆ ತಳ್ಳಲ್ಪಟ್ಟು ಹಾರುತ್ತಾ ಸಾಗುವವು.
3) ಮನುಷ್ಯ ನಡೆಯುವಾಗ ಯಾವ ಬಲದಿಂದ ಭೂಮಿಯನ್ನು ಮೆಟ್ಟಿ ಮುನ್ನಡೆಯುವನೋ, ಅಷ್ಟೇ ಬಲದೊಡನೆ ಭೂಮಿಯು ನಮ್ಮನ್ನು ವಾಪಸ್ಸು ಒತ್ತುವುದು ಇದರಿಂದ ನಡೆಯಲು ಸಾಧ್ಯ.
4) ದೋಣಿಯನ್ನು ನಾವಿಕರು ಹಿಂದಕ್ಕೆ ಹುಟ್ಟು ಹಾಕುವ ಬಲದೊಂದಿಗೆ ದೋಣಿಯು ಮುಂದಕ್ಕೆ ಸಾಗುವುದು.
5) ಈಜುಗಾರರು ಕೈನಿಂದ ನೀರನ್ನು ಎಳೆದು ಮುಂದೆ ಈಜುವುದು.
6) ವಿಮಾನಗಳು ಹಾರಾಟ ಮಾಡುತ್ತಾ ಸಾಗುವುದು. ಇವೆಲ್ಲ ನ್ಯೂಟನ್ ಮೂರನೇ ತತ್ವದ ಅನ್ವಯಗಳು.
0 Comments