ಕೆಸರಿನ ರಸ್ತೆಯಲ್ಲಿ ಜಾರಲು ಕಾರಣವೇನು?

ನಯವಾದ ಜಾಗದಲ್ಲಿ ಘರ್ಷಣೆ ಕಡಿಮೆ ಇರುತ್ತದೆ. ಯಾವುದೇ ವಸ್ತು ಚಲಿಸಲು, ನಿಲ್ಲಲು, ಘರ್ಷಣೆ ಬೇಕು. ಇಲ್ಲದಿದ್ದಲ್ಲಿ ಅದು ಜಾರುತ್ತದೆ. ಒರಟಾದ ನೆಲದಲ್ಲಿ ಘರ್ಷಣೆ ಉಂಟಾಗುತ್ತದೆ. ನೆಲದಲ್ಲಿ ಘರ್ಷಣೆ ಉಂಟಾಗುವುದರಿಂದ ಗೋಲೀಯ ಚಲನೆಯನ್ನು ತಡೆಯುತ್ತದೆ. ಚಲನೆಯನ್ನು ತಡೆಯುವುದರಿಂದ ಘರ್ಷಣೆಯೂ ಕೂಡ ಒಂದು ಬಲ. ಘರ್ಷಣೆಯು ಅನೇಕ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ ನೆಲಕ್ಕೂ ಕಾಲಿಗೂ ನಡುವೆ ಘರ್ಷಣೆ ಉಂಟಾಗುವುದರಿಂದ ನಾವು ನಡೆಯಲು, ಓಡಲು, ನಿಲ್ಲಲು ಸಾಧ್ಯ ಇಲ್ಲವಾದಲ್ಲಿ ಜಾರಿ ಬೀಳುತ್ತಿದ್ದೆವು. ಕೆಸರು ರಸ್ತೆಯಲ್ಲಿ ಜಾರಲು ಪ್ರಮುಖ ಕಾರಣ ಘರ್ಷಣೆ (Friction) ಇಲ್ಲದಿರುವುದು. ವಾಹನಗಳು ಚಲಿಸಬೇಕಾದರೆ ವಾಹನದ ಚಕ್ರ ಮತ್ತು ಭೂಮಿಯ ನಡುವೆ ಘರ್ಷಣೆ ಉಂಟಾಗಿರಬೇಕು. ಘರ್ಷಣೆಯು ಚಲನೆಗೆ ಸಹಕಾರಿಯಾಗುತ್ತದೆ. ಘರ್ಷಣೆ ಇಲ್ಲದಿರುವುದರಿಂದ ಈ ಕೆಳಗಿನ ಸಂದರ್ಭದಲ್ಲಿ ಚಲಿಸಲು ಸಾಧ್ಯವಿಲ್ಲ.

1) ಕೆಸರಿನ ರಸ್ತೆಯಲ್ಲಿ ಚಲಿಸಲು ಸಾಧ್ಯವಿಲ್ಲ.

2) ನಯವಾದ ರಸ್ತೆಯಲ್ಲಿ ಚಲಿಸಲು ಸಾಧ್ಯವಿಲ್ಲ.

3) ಮರಳಿನಲ್ಲಿ ಚಲಿಸಲು ಕಷ್ಟವಾಗುತ್ತದೆ.

4) ಗಾಜಿನ ಮೇಲೆ ಚಲಿಸುವುದು ಕಷ್ಟ.

5) ಮಂಜುಗಡ್ಡೆಯ ಮೇಲೆ ಚಲಿಸುವುದು ಕಷ್ಟ.

6) ಅಥ್ಲೆಟಿಕ್ಸ್ ವ್ಯಕ್ತಿಗಳ ಶೂಗಳ ತಳಭಾಗದಲ್ಲಿ ಮುಳ್ಳಿನ ಆಕೃತಿಗಳಿರುತ್ತವೆ.

7) ಮಂಜಿನ ಮೇಲೆ ನಡೆಯುವಾಗ ಕಬ್ಬಿಣದ ಕಡ್ಡಿಯನ್ನು ಬಳಸುತ್ತಾರೆ. ಕಾರಣ, ಮಂಜುಗಡ್ಡೆಯಲ್ಲಿ ಘರ್ಷಣೆ ಇಲ್ಲದಿರುವುದು.

Post a Comment

0 Comments