ಚಾರ್ಲ್ಸ್ ಗುಡ್ ಹಿಯರ್ ರವರ ಪರಿಚಯ

ಇವರು ರಬ್ಬರ್ ಅನ್ನು ಗಟ್ಟಿಗೊಳಿಸುವ ವಿಧಾನವನ್ನು ಜಗತ್ತಿಗೆ ತೋರಿಸಿದ ವಿಜ್ಞಾನಿ. ವಾಹನಗಳ ಚಕ್ರಗಳಲ್ಲಿ ಬಳಸುವ ರಬ್ಬರ್ ಟೈರ್ಗಳು ಚಾರ್ಲ್ಸ್ ಗುಡ್ ಹಿಯರ್ ಅವರ ಸಂಶೋಧನೆ ಫಲವಾಗಿದೆ.

ರಬ್ಬರ್ ಮರದಿಂದ ಬರುವ ರಬ್ಬರ್ ಹಾಲನ್ನು ರಾಸಾಯನಿಕವಾಗಿ “ಲೇಟೆಕ್ಸ್” ಎಂದು ಕರೆಯುತ್ತಾರೆ. ಇದರಿಂದ ನೈಸರ್ಗಿಕ ರಬ್ಬರ್ ತಯಾರಿಸುತ್ತಾರೆ. ಇಂತಹ ಲೇಟೆಕ್ಸ್ ನಿಂದ ತಯಾರಾದ ರಬ್ಬರ್ ಬಹು ಮೃದುವಾಗಿದ್ದು, ಏನಕ್ಕೂ ಪ್ರಯೋಜನ ಬರುತ್ತಿರಲಿಲ್ಲ. ಚಾರ್ಲ್ಸ್ ಗುಡ್ ಹಿಯರ್ ಇಂತಹ ಲೇಟೆಕ್ಸ್ ಅನ್ನು ಗಟ್ಟಿಗೊಳಿಸಿದರೆ ಬಹು ಉಪಯುಕ್ತವಾಗುತ್ತದೆ. ಆದರೆ ಗಟ್ಟಿಗೊಳಿಸುವುದು ಹೇಗೆ? ಎಂಬುದನ್ನು ಸತತ ಐದು ವರ್ಷಗಳ ನಿರಂತರ ಪ್ರಯತ್ನದಿಂದ ಕಂಡು ಹಿಡಿದನು. ಈ ಮಹಾನ್ ವಿಜ್ಞಾನಿಯು ರಬ್ಬರ್ನಿಂದ ಉತ್ಪತ್ತಿಯಾದ ಲೇಟೆಕ್ಸ್ ನ ವಾಸನೆ ಕುಡಿದು ಟಿ.ಬಿ ರೋಗಕ್ಕೆ ತುತ್ತಾಗಿದ್ದರು. ಆದರೂ ಛಲ ಬಿಡದೆ ರಬ್ಬರ್ ಗಟ್ಟಿಗೊಳಿಸಲೇಬೇಕೆಂದು ಹಠ ಹಿಡಿದರು. ಒಮ್ಮೆ ರಕ್ತ ವಾಂತಿ ಮಾಡುವಾಗ ಅನೇಕರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರೆ. ಚಾರ್ಲ್ಸ್ ಗುಡ್ ಹಿಯರ್ ರವರು ಅವರಿಗೆ ಹೀಗೆ ಹೇಳುತ್ತಾರೆ “ಆಸ್ಪತ್ರೆಗೆ ಹೋಗುವುದಿರಲಿ, ರಬ್ಬರ್ ಗಟ್ಟಿಗೊಳಿಸುವುದು ಹೇಗೆ? ಎಂದು ಪ್ರಶ್ನೆ ಹಾಕುತ್ತಾರೆ". ಅನೇಕ ಮಂದಿ ಇವನೊಬ್ಬ ಹುಚ್ಚ ಎಂದು ಭಾವಿಸುತ್ತಾರೆ.

ಚಾರ್ಲ್ಸ್ ಗುಡ್ ಹಿಯರ್ಗೆ ರಬ್ಬರ್ ಗಟ್ಟಿಗೊಳಿಸುವ ಛಲವೇ ಮುಂದೆ ಒಂದು ದಿನ ರಬ್ಬರ್ ಗಟ್ಟಿಗೊಳಿಸುವಂತಾಯಿತು. ಒಂದು ದಿನ ಮೃದುವಾದ ರಬ್ಬರ್ ಅನ್ನು ಸಂಶೋಧನೆಗಾಗಿ ಖರೀದಿಸಲು ಹೋದಾಗ ಅಂಗಡಿಯಿಂದ ಪಡೆದ ರಬ್ಬರ್ ಆಕಸ್ಮಿಕವಾಗಿ ಕೈ ಜಾರಿ 'ಸ್ಟವ್' ಮೇಲೆ ಬಿದ್ದಿತು. ಇದರಿಂದ ಬೇಸರಗೊಂಡು ಅದನ್ನು ಎತ್ತಿಕೊಳ್ಳಲು ಹೋದ ಗುಡ್ ಹಿಯರ್ಗೆ ಆಶ್ಚರ್ಯ ಕಾದಿತ್ತು. ಸ್ಟವ್ ಮೇಲೆ ಬಿದ್ದ ರಬ್ಬರ ಗಟ್ಟಿಯಾಗಿತ್ತು. ಇದನ್ನು ಕಂಡ ಗುಡ್ ಹಿಯರ್ ಚಕಿತನಾಗಿ ಸ್ಟವ್ನಲ್ಲಿದ್ದ ಎಣ್ಣೆಯಲ್ಲಿ ಏನಿದೆ? ಅದು ಗಟ್ಟಿಯಾಗಲು ಕಾರಣವೇನು? ಎಂದು ಸಂಶೋಧಿಸಿದಾಗ ಅದರಲ್ಲಿ ಗಂಧಕವಿರುವುದು ಪತ್ತೆಯಾಯಿತು. ಮುಂದೆ ಗಂಧಕವನ್ನು ಮೆದು ರಬ್ಬರ್ಗೆ ಸೇರಿಸಿ ಗಡಸುಗೊಳಿಸಿದನು. ಈ ವಿಧಾನವನ್ನು “ವಲ್ಕನೀಕರಣ” ಎನ್ನುವರು.

ವಲ್ಕನೀಕರಣದ ಪರವಾಗಿ ರಬ್ಬರ್ ಅನ್ನು ಗಟ್ಟಿಗೊಳಿಸಿ ವಾಹನಗಳ ಟೈರನ್ನು ತಯಾರಿಸಲು ಬಳಸುತ್ತಾರೆ. 500 ಪ್ರಯಾಣಿಕರನ್ನು ಹೊತ್ತು, 49,000 ಅಡಿ ಎತ್ತರದಲ್ಲಿ ಹಾರುವ ದೈತ್ಯಾಕಾರದ ಜಂಬೊ ಜಟ್ ವಿಮಾನವು ಕೇವಲ ಮೂರೇ ಚಕ್ರಗಳಲ್ಲಿ ಭೂಮಿಗಿಳಿದು ರನ್ವೇನಲ್ಲಿ ಸಾಗುತ್ತದೆ. ಅಷ್ಟು ವೇಗದಲ್ಲಿ ಆಕಾಶದಿಂದ ಭೂಮಿಗಿಳಿಯುವ, ವಿಮಾನದ ತೂಕವನ್ನು ಸಹಿಸಿಕೊಳ್ಳುವುದು ಚಕ್ರದ ಟೈರ್ನ ಗಡಸುತನವಲ್ಲವೇ! ಈ ಗಡಸುತನವನ್ನು ಟೈರ್ನ ರಬ್ಬರ್ಗೆ ನೀಡಿದವರು ಚಾರ್ಲ್ಸ್ ಗುಡ್ ಹಿಯರ್ ಅಲ್ಲವೇ..... Thanks to Charles Goodyear.

Post a Comment

0 Comments