ಇವರು ಇಟಲಿಯ ಭೌತಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ. ಇವರನ್ನು ಆಧುನಿಕ ವಿಜ್ಞಾನ ಮತ್ತು ಆಧುನಿಕ ಭೌತಶಾಸ್ತ್ರದ ಪಿತಾಮಹ ಎಂದು ಕೂಡ ಕರೆಯುತ್ತಾರೆ. ಗೆಲಿಲಿಯೋರವರು 1610ರಲ್ಲಿ ಟೆಲಿಸ್ಕೋಪನ್ನು ಬಳಸಿ ಗುರು ಗ್ರಹದಲ್ಲಿರುವಂತಹ ಉಪಗ್ರಹಗಳನ್ನು ಪತ್ತೆಹಚ್ಚಿದರು. ಆ ಉಪಗ್ರಹಗಳೆಂದರೆ ಐಒ, ಯುರೋಪ, ಗ್ಯಾನಿಮೆಡ್, ಕ್ಯಾಲಿಸ್ಟೊ. ಇವರು ಕ್ಯನಮ್ಯಾಟಿಕ್ಸ್, ಡೈನಾಮಿಕ್ಸ್ ಮತ್ತು ಟೆಲಿಸ್ಕೋಪ್ ವೀಕ್ಷಣಾ ಖಗೋಳಶಾಸ್ತ್ರ, ಎಲಿಯೊ ಸೆಂಟ್ರಿಸಮ್ ವಿಷಯಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
- ಥರ್ಮೋಮೀಟರ್ ಅನ್ನು ಕಂಡುಹಿಡಿದರು. ಗೆಲಿಲಿಯೋನ ಸಂಶೋಧನೆಗಳು ಚರ್ಚಿನ ಕೋಪಕ್ಕೆ ಕಾರಣವಾಗಿ, ಚರ್ಚ್ ನಿರ್ಬಂಧದಲ್ಲೇ ಬಾಳಬೇಕಾಯಿತು. 1642ರಲ್ಲಿ ತನ್ನ 77ನೇ ವಯಸ್ಸಿನಲ್ಲಿ ನಿಧನರಾದರು.
0 Comments