ಒಂದು ಜೀವಿಯ ಗರ್ಭಧಾರಣೆ ನಂತರ ಮರಿ ಗಂಡೋ ಅಥವಾ ಹೆಣ್ಣೋ ಆಗಲು ಮೂಲ ಕಾರಣ ಸಂಯೋಜಿತ (ಗರ್ಭಧರಿಸಿದ) ತತ್ತಿಯ ವರ್ಣತಂತುಗಳು. ವರ್ಣತಂತುಗಳು ಮರಿಯ ಲಿಂಗವನ್ನು ನಿರ್ಧರಿಸುವುದು ಮಾತ್ರವಲ್ಲದೇ ಗುಣಗಳನ್ನು ಕೂಡ ನಿರ್ಧರಿಸುತ್ತದೆ ಹಾಗೂ ವರ್ಗಾಯಿಸುತ್ತವೆ. ಇದರ ಬಗ್ಗೆ ಸವಿಸ್ತಾರವಾಗಿ ಸಂಶೋಧನೆ ನಡೆಸಿ, ವೈಜ್ಞಾನಿಕವಾಗಿ ಸಾಬೀತು ಪಡಿಸಿದವರು ಥಾಮಸ್ ಹಂಟ್ ಮೊರ್ಗಾನ್ ಎಂಬ ಅಮೇರಿಕಾದ ತಳಿಶಾಸ್ತ್ರಜ್ಞ, ಥಾಮಸ್ ಹಂಟ್ ಮೋರ್ಗಾನ್ ಡ್ರಾಸೋಫಿಲಾದ ನೊಣದಲ್ಲಿರುವ ವರ್ಣತಂತುಗಳ ಮೇಲೆ ಅಧ್ಯಯನವು ಗಂಡು ಮತ್ತು ಹೆಣ್ಣು ನೊಣಗಳಿರುವ ವ್ಯತ್ಯಾಸವನ್ನು ಕಂಡು ಹಿಡಿಯಲು ಸಾಧ್ಯವಾಯಿತು.
ಡ್ರಾಸೋಪಿಲಾದ ಗಂಡು ಮತ್ತು ಹೆಣ್ಣು ನೊಣಗಳಲ್ಲಿ 4 ಜೊತೆ ವರ್ಣತಂತುಗಳಿದ್ದು, ಅವುಗಳಲ್ಲಿ 3 ಜೊತೆ ಅನುರೂಪ (ಒಂದೇ ರೀತಿಯ) ವಾಗಿದ್ದವು, ಆದರೆ ಒಂದು ಜೊತೆ ಮಾತ್ರ ಭಿನ್ನವಾಗಿದ್ದವು. ಹೆಣ್ಣು ನೊಣದಲ್ಲಿ ಹಾರೆಯಂತೆ ನೆಟ್ಟಗೆ ಉದ್ದವಾದ ಒಂದು ಜೊತೆ ವರ್ಣತಂತುಗಳು ಕಂಡು ಬಂದವು. ಇವುಗಳನ್ನು ಮೊರ್ಗಾನ್ ವಿಜ್ಞಾನಿ XX ವರ್ಣತಂತು ಎಂದು ಕರೆದನು.
ಗಂಡು ನೊಣದಲ್ಲಿರುವ ಒಂದು ಜೊತೆಯಲ್ಲಿ ಒಂದು ವರ್ಣತಂತು ನೆಟ್ಟಗೆ ಹಾರೆಯಂತಿದ್ದು, ಅದನ್ನು 'X' ವರ್ಣತಂತು ಎಂದು ಕರೆದನು. ಆದರೆ ಮತ್ತೊಂದು ವರ್ಣತಂತು ಮಾತ್ರ ಕೊಕ್ಕೆಯಂತೆ ಬಾಗಿತು. ಅದನ್ನು ಮಾರ್ಗೊನ್ರವರು 'Y' ವರ್ಣತಂತು ಎಂದು ಕರೆದರು.
ತಾಯಿ ನೊಣದಲ್ಲಿ ಕೋಶವಿಭಜನೆಯಿಂದ ತತ್ತಿಗಳು ಉತ್ಪತ್ತಿಯಾಗುವಾಗ ಅನುರೂಪವಾದ ವರ್ಣತಂತುಗಳು ಪ್ರತ್ಯೇಕವಾಗಿ ಪ್ರತಿ ತತ್ತಿಗಳಿಗೂ 3 ಸಾಧಾರಣ ವರ್ಣತಂತುಗಳು ಮತ್ತು ಒಂದು 'Y' ವರ್ಣತಂತು ಬರುತ್ತದೆ.
ಪ್ರತಿ ತತ್ತಿಯಲ್ಲೂ 3+1X ವರ್ಣತಂತುಗಳಿರುತ್ತವೆ. ತಂದೆ ನೊಣದಲ್ಲಿ ಕೋಶವಿಭಜನೆಯಿಂದ ವೀರ್ಯಾಣುಗಳು ಉತ್ಪತ್ತಿಯಾಗಿ 3 ಅನುರೂಪ ವರ್ಣತಂತುಗಳು ಮತ್ತು XY ವರ್ಣತಂತುಗಳು ವಿಭಜನೆಯಾಗಿ ಎರಡು ಬಗೆಯ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಒಂದು ಬಗೆಯ ವೀರ್ಯಾಣುವಿನಲ್ಲಿ 3+1X ವರ್ಣತಂತುಗಳಿರುತ್ತವೆ. ಇನ್ನೊಂದು ಬಗೆಯ ವೀರ್ಯಾಣುವಿನಲ್ಲಿ 3+1X ವರ್ಣತಂತುಗಳಿರುತ್ತವೆ. ಒಂದು ಬಗೆಯ ವಿರ್ಯಾಣು ಎಷ್ಟು ಸಂಖ್ಯೆಯಲ್ಲಿ ವರ್ಣತಂತುವಿದೆಯೋ ಅಷ್ಟೆ ಸಂಖ್ಯೆಯ ವರ್ಣತಂತುಗಳು ಮತ್ತೊಂದು ಇರುತ್ತದೆ. 3+1X ವರ್ಣತಂತುಗಳಿರುವ ತತ್ತಿಯೊಡನೆ 3+1X ವರ್ಣತಂತುವಿರುವ ವೀರ್ಯಾಣು ಸಂಯೋಗವಾದರೆ ಯುಗ್ಮದಲ್ಲಿ 3+3, X+X ವರ್ಣತಂತುಗಳು ಸೇರಿರುತ್ತವೆ.
XX ವರ್ಣತಂತುಗಳು ಸೇರಿರುವುದರಿಂದ ಇದು ಹೆಣ್ಣು ನೊಣವಾಗಿ ಬೆಳೆಯುತ್ತದೆ. ಮಾನವನ ದೇಹದಲ್ಲಿ 23 ಜೊತೆ (46) ವರ್ಣತಂತುಗಳಿವೆ. X ವರ್ಣತಂತುಗಳು ಉದ್ದವಾಗಿವೆ. Y ವರ್ಣತಂತುಗಳು ಗಿಡ್ಡವಾಗಿವೆ. ಗಂಡಸಿನ ದೇಹದ ಜೀವಕೋಶಗಳಲ್ಲೇ 44+XY ವರ್ಣಂತುಗಳು, ಹೆಂಗಸಿನ ದೇಹದ ಜೀವಕೋಶಗಳಲ್ಲೇ 44+XX ವರ್ಣತಂತುಗಳು ಇವೆ.
ತತ್ತಿ ಮತ್ತು ವೀರ್ಯಾಣು ಉತ್ಪತ್ತಿಯಾಗುವಾಗ ವರ್ಣತಂತುಗಳ ಸಂಖ್ಯೆ ಅರ್ಧಕ್ಕೆ ಇಳಿಯುತ್ತದೆ. ತತ್ತಿಯಲ್ಲಿ 22+X ವರ್ಣತಂತುಗಳಿರುತ್ತವೆ. ವೀರ್ಯಾಣುವಿನಲ್ಲಿ 22+X ಅಥವಾ 22+Y ವರ್ಣತಂತು ಗಳಿರುತ್ತವೆ. ತತ್ತಿಯೊಡನೆ 22+X ವರ್ಣತಂತುಗಳಿರುತ್ತವೆ.
ತತ್ತಿಯೊಡನೆ 22+X ವರ್ಣತಂತುಗಳಿರುವ ವಿರ್ಯಾಣು ಸಂಯೋಗವಾದರೆ ಹೆಣ್ಣುಮಗು, 22Y ವರ್ಣತಂತುಗಳಿರುವ ವೀರ್ಯಾಣು ತತ್ತಿಯೊಡನೆ ಸಂಯೋಗಗೊಂಡರೆ ಗಂಡು ಮಗುವಾಗುತ್ತದೆ.
0 Comments