ಉಪವಾಸವಿದ್ದಾಗಲೂ ಮಾನವನ ದೇಹದಲ್ಲಿ ಶಕ್ತಿ ಹೇಗೆ ಬಿಡುಗಡೆಯಾಗುತ್ತದೆ?

ಮಾನವನು ಸೇವಿಸಿದ ಆಹಾರವು ಜೀರ್ಣಕ್ರಿಯೆ ಮೂಲಕ ಪಚನ ಹೊಂದಿ ಶಕ್ತಿ ಬಿಡುಗಡೆಯಾಗುತ್ತದೆ. ಇಂತಹ ಶಕ್ತಿಯು ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತದೆ. ನಾವು ಆಹಾರವನ್ನು ತೆಗೆದುಕೊಂಡಾಗ ಆಹಾರವು ಸರಳ ರೂಪವಾದ ಗ್ಲುಕೋಸ್ ಆಗಿ ಪರಿವರ್ತನೆಯಾಗುತ್ತದೆ. ದೇಹದಲ್ಲಿ ಉತ್ಪತ್ತಿಯಾದ ಗ್ಲುಕೋಸ್ ರಕ್ತದಲ್ಲಿ ವಿಲೀನವಾಗಿ ರಕ್ತದ ಮೂಲಕ ದೇಹದ ಎಲ್ಲಾ ಭಾಗಕ್ಕೂ ಸರಬರಾಜಾಗುತ್ತದೆ. ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾದ ಗ್ಲುಕೋಸ್ನ ಸ್ವಲ್ಪ ಭಾಗವು ಗ್ಲೈಕೋಜನ್ ಆಗಿ ಯಕೃತ್ & ಸ್ನಾಯುಗಳಲ್ಲಿ ಸಂಗ್ರಹಣೆಯಾಗಿರುತ್ತದೆ. ಇಂತಹ ಗ್ಲೈಕೋಜನ್ ಮಾನವನಲ್ಲಿ ಶೇಖರಣೆಯಾಗಿರುವ ಶಕ್ತಿಯ ರೂಪವಾಗಿದೆ.

ಉಪವಾಸವಿದ್ದಾಗ ನಾವು ಆಹಾರವನ್ನು ಸೇವಿಸದಿದ್ದರೂ ಕೂಡ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿಭಾಯಿಸಲು ಶಕ್ತಿ ಬಿಡುಗಡೆಯಾಗುತ್ತದೆ. ಕಾರಣ ಸ್ನಾಯುಗಳು ಮತ್ತು ಯಕೃತದಲ್ಲಿ ಶೇಖರಣೆಯಾಗಿರುವ ಗ್ಲೈಕೋಜನ್ ಅನ್ನು ಮೇದೋಜೀರಕದ ಅಲ್ಫಾ ಕೋಶಗಳಲ್ಲಿ ಉತ್ಪತ್ತಿಯಾಗುವ ಗ್ಲುಕಗಾನ್ ಎಂಬ ಹಾರ್ಮೂನ್ ಗ್ಲುಕೋಸ್ ಆಗಿ ಪರಿವರ್ತನೆಯಾಗುತ್ತದೆ. ಅಂತಹ ಗ್ಲುಕೋಸ್ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಆದುದ್ದರಿಂದ ಉಪವಾಸವಿದ್ದಾಗಲೂ ಕೂಡ ಅನೇಕ ಕೆಲಸ ಕಾರ್ಯ ಮಾಡಲು ಗ್ಲೈಕೋಜನ್ ಸಹಕಾರಿಯಾಗುತ್ತದೆ. ಗ್ಲುಕಗಾನ್ ಎಂಬುದು ಇನ್ಸುಲಿನ್ಗೆ ವಿರುದ್ಧವಾದ ಪರಿಣಾಮವನ್ನು ಹೊಂದಿರುತ್ತದೆ. ಇನ್ಸುಲಿನ್ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಿದರೆ ಗ್ಲುಕಗಾನ್ ಎಂಬ ಹಾರ್ಮೂನ್ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ.

ಪಾಲಿಸ್ಯಾಕರೈಡ್ ಆದ ಗ್ಲೈಕೋಜನ್ ಗ್ಲುಕೋಸ್ ಎಂಬ ಮಾನೋಸ್ಯಾಕರೈಡ್ ಆಗಿ ಪರಿವರ್ತನೆಯಾಗುವುದನ್ನೇ ‘ಗ್ಲೈಕೋಜನೋಲೈಸಿಸ್’ ಎಂದು ಕರೆಯಲಾಗುತ್ತದೆ. ಗ್ಲೈಕೋಜನೋಲೈಸಿಸ್ ಆಗಲೂ ಗ್ಲುಕಗಾನ್ & ಎಫಿ ನೆಪ್ರಿನ್ ಹಾರ್ಮೂನ್ಗಳು ಪ್ರಚೋಧಿಸುತ್ತವೆ.

ಯಕೃತದಲ್ಲಿ ಸಂಗ್ರಹವಾಗಿರುವ ಶಕ್ತಿಯ ರೂಪವಾದ ಗ್ಲೈಕೋಜನ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುವ ಕಾರ್ಯವನ್ನು ಗ್ಲುಕಗಾನ್ ಎಂಬ ಹಾರ್ಮೂನ್ ಮಾಡುತ್ತದೆ. ಗ್ಲುಕೋಗಾನ್ ಹಾರ್ಮೂನ್ ಸ್ರವಿಸುವಿಕೆ ಕಡಿಮೆಯಾಗಲು ಕಾರಣವೆಂದರೆ ಯೂರಿನ್ನ ಉತ್ಪಾದನೆ ಹೆಚ್ಚಾಗುವುದು, ರಕ್ತದಲ್ಲಿ ಮುಕ್ತ ಕೊಬ್ಬಿನಾಮ್ಲ ಹೆಚ್ಚಾಗುವುದು ಕಾರಣವಾಗಿದೆ.

Post a Comment

0 Comments