ಐಸಾಕ್ ನ್ಯೂಟನ್ರವರ ಪರಿಚಯ

ಐಸಾಕ್ ನ್ಯೂಟನ್ ರವರು ಬ್ರಿಟಿಷ್ ಭೌತಶಾಸ್ತ್ರಜ್ಞ. ಖಗೋಳ ಶಾಸ್ತ್ರಜ್ಞ. ಇವರು 1642ರ ಡಿಸೆಂಬರ್ 25 ರಂದು ಜನಿಸಿದರು. ಭೂಮಿಗೆ ಗುರುತ್ವಾಕರ್ಷಣೆ ಇದೆ ಎಂಬುದನ್ನು ಪ್ರತಿಪಾದಿಸಿದರು ಹಾಗೂ ಚಲನಾ ನಿಯಮಗಳನ್ನು ಜಗತ್ತಿಗೆ ತಿಳಿಸಿದರು. ಗೆಲಿಲಿಯೋ ಗೆಲಿಲಿರವರು ಮರಣ ಹೊಂದಿದ ವರ್ಷದಂದೇ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರಕ್ಕೆ ಹೆಚ್ಚು ಕೊಡುಗೆ ನೀಡಿದ ಐಸಾಕ್ ನ್ಯೂಟನ್ರವರು ಜನಿಸಿದರು. ಇವರ ಪ್ರಮುಖ ಗ್ರಂಥ “ಪಿಲಾಸೊ ಪಿಯಾ ನ್ಯಾಚುರಾಲಿಸ್ ಪ್ರಿನ್ಸಿಪಿಯಾ ಮೆಥಮೆಟಿಕ”. ಇವರು ಪ್ರಿಸಮ್ (ಪಟ್ಟಕ)ಮೂಲಕ ಬಿಳಿ ಬೆಳಕನ್ನು ಹಾಯಿಸಿ ಅನೇಕ ವರ್ಣಗಳಾಗಿ ವಿಭಜಿಸಿ ದೃಶ್ಯಸಾಧ್ಯ ರೋಹಿತವಾಗಿಸಬಹುದೆಂಬ ಅವಲೋಕನದ ಆಧಾರದ ಮೇಲೆ ವರ್ಣ ಸಿದ್ದಾಂತವನ್ನು ಮಂಡಿಸಿದರು. ನ್ಯೂಟನ್ರವರು ಅವೇಗ ಮತ್ತು ಕೋನೀಯ ಅವೇಗಗಳ ಸಂರಕ್ಷಣಾ ನಿಯಮಗಳನ್ನು ಪ್ರತಿಪಾದಿಸಿದರು. ಪ್ರಪ್ರಥಮವಾಗಿ ಕಾರ್ಯರೂಪದಲ್ಲಿ ಪ್ರತಿಫಲನ ದೂರದರ್ಶಕವನ್ನು ನಿರ್ಮಿಸಿದರು. ನ್ಯೂಟನ್ರವರು ಗಣಿತಶಾಸ್ತ್ರಕ್ಕೂ ಕೂಡ ಕೊಡುಗೆ ನೀಡಿದ್ದು, ಯಾವುದೇ ಗಾತಕ್ಕೆ ಅನ್ವಯವಾಗುವ ಸಾಮಾನ್ಯೀಕರಿಸಿದ ದ್ವೀಪದ ಪ್ರಮೇಯದ ಶೋಧಕರೆಂದು ಗೌರವಿಸಲಾಗುತ್ತದೆ. ನ್ಯೂಟನ್ ರವರ ಅನನ್ಯತೆ, ನ್ಯೂಟನ್ ರವರ ವಿಧಾನ, ಘನ ಸಮತಲಗಳ ವಕ್ರೀಕರಣಕ್ಕೆ ಕೊಡುಗೆ ನೀಡಿದ್ದಾರೆ. ಮಾರ್ಚ್ 31, 1727ರಲ್ಲಿ ಲಂಡನ್ನಲ್ಲಿ ನಿದ್ದೆಯಲ್ಲೇ ಕೊನೆಯುಸಿರೆಳೆದರು. ಇವರ ಸಾವಿಗೆ ಅವರ ದೇಹದಲ್ಲಿ ರಸ ಸಿದ್ಧಾಂತ ಚಟುವಟಿಕೆ ಸಂಬಂಧಿಸಿದಂತೆ ಪಾದರಸ ಶೇಖರಣೆಯಾಗಿದ್ದು ಅದಕ್ಕಾಗಿ ಸತ್ತಿರಬೇಕೆಂದು ಊಹಿಸಲಾಗಿದೆ.

Post a Comment

0 Comments