ಗಾಜಿನ ನಾಳಕ್ಕೆ ನೀರಿನ ಹನಿಗಳು ಅಂಟಿಕೊಂಡಿರುವಂತೆ ಕಾಣಲು ಕಾರಣವೇನು?
ಗಾಜಿನ ಹಲಗೆ ಅಥವಾ ನಾಳಕ್ಕೆ ನೀರಿನ ಹನಿಗಳು ಅಂಟಿಕೊಂಡಿರುವಂತೆ ಕಾಣುತ್ತದೆ. ಕಾರಣ, ಅನುಸಕ್ತಿ ಬಲ. ಅನುಸಕ್ತಿ ಎಂದರೆ, ಬೇರೆ ಬೇರೆ ಬಗೆಯ ವಸ್ತುಗಳು ಒಂದಕ್ಕೊಂದು ಅಂಟಿಕೊಳ್ಳುವ ಬಲಕ್ಕೆ ಅನುಸಕ್ತಿ (Adhesive Force) ಎನ್ನುವರು.
ಸಂಸಕ್ತಿ ಗುಣ (Cohesive Forece) : ಒಂದೇ ಬಗೆಯ ವಸ್ತುವಿನ ಅಣುಗಳು ಪರಸ್ಪರ ಆಕರ್ಷಣೆ ಹೊಂದಿರುತ್ತವೆ. ಈ ಗುಣಕ್ಕೆ ಸಂಸಕ್ತಿ ಎನ್ನುವರು.
ಉದಾ: ಸಂಸತ್ತಿಗೆ ನಿದರ್ಶನ: ಒಣಗಿರುವ ಎರಡು ಗಾಜಿನ ಸಣ್ಣ ಹಲಗೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಬೆರಳುಗಳಿಂದ ಒತ್ತಿ ಎರಡನ್ನು ಬಿಡಿಸಲು ಸಾಧ್ಯವಿಲ್ಲ. ಕಾರಣ 'ಸಂಸಕ್ತಿ' (Cohesive Force).
ಟಿ.ವಿ. ರಿಮೋಟ್ ಕಂಟ್ರೋಲ್ನಲ್ಲಿ ಬಳಕೆಯಾಗುವ ವಿದ್ಯುತ್ ಕಾಂತೀಯ ಅಲೆ ಯಾವುದು?
ಅವೆಗೆಂಪು (Infrared) ಅಲೆಗಳನ್ನು ಮನೆಗಳಲ್ಲಿ ಬಳಸುವ ಟಿ.ವಿ. ರಿಮೋಟ್ ಕಂಟ್ರೋಲ್ನಲ್ಲಿ ಬಳಸಲಾಗುತ್ತದೆ. ಸಿ.ಸಿ.ಟಿ.ವಿ.ಗಳಲ್ಲೂ ಕೂಡ ಅವೆಗೆಂಪು ಕಿರಣಗಳನ್ನು ಬಳಕೆ ಮಾಡಲಾಗುತ್ತದೆ.
ರಾತ್ರಿ ವೇಳೆ ಬೆಳಕು ಅಗೋಚರವಾಗಿದ್ದಾಗ ವಸ್ತುಗಳನ್ನು ನೋಡಲು, ರಾತ್ರಿ ಗೋಚರಿಸುವ ಸಾಧನಗಳಲ್ಲಿ (Night Vision Device) ಗಳಲ್ಲಿ ಬಳಸುತ್ತಾರೆ. ಥರ್ಮೋಗ್ರಾಫಿಯಲ್ಲಿ ಕೂಡ ಅವೆಗೆಂಪು ಕಿರಣವನ್ನು ಬಳಕೆ ಮಾಡುತ್ತಾರೆ. ಐಪರ್ ಸ್ಪೆಕ್ಟ್ರಲ್ ಇಮೇಜಿಂಗ್ ನಲ್ಲೂ ಕೂಡಬಳಕೆ ಮಾಡುತ್ತಾರೆ.
ಖೋಟಾ ನೋಟುಗಳನ್ನು ಪತ್ತೆಹಚ್ಚಲು ಬಳಸುವ ವಿದ್ಯುತ್ಕಾಂತೀಯ ಅಲೆ ಯಾವುದು?
ಖೋಟಾ ನೋಟುಗಳನ್ನು ಪತ್ತೆಹಚ್ಚಲು ನೇರಳಾತೀತ ಕಿರಣಗಳನ್ನು ಬಳಕೆ ಮಾಡಲಾಗುತ್ತದೆ. ತಿದ್ದಿದ ದಾಖಲೆಗಳನ್ನು ಪತ್ತೆಹಚ್ಚಲು ಕೂಡ ನೇರಳಾತೀತ ಕಿರಣಗಳನ್ನು ಬಳಕೆ ಮಾಡಲಾಗುತ್ತದೆ. ಅಧಿಕೃತ ಕಾಗದದ ನೋಟುಗಳನ್ನು ನೇರಳಾತೀತ ಕಿರಣಗಳಿಗೆ (Ultra Violet Rays) ಒಡ್ಡಿದಾಗ ಒಳಪು ಕಂಡುಬರುತ್ತದೆ. ನೇರಳಾತೀತ ಕಿರಣಗಳು ಗೋಚರಿಸುವ ಬೆಳಕಿಗೆ ಕಾಣದಂತಹ ವಸ್ತುಗಳನ್ನು ನೋಡಲು ಬಳಕೆ ಮಾಡಲಾಗುತ್ತದೆ. ನೇರಳಾತೀತ ಕಿರಣಗಳನ್ನು ವೈದ್ಯಕೀಯವಾಗಿ ಬ್ಯಾಕ್ಟಿರಿಯಾ ಕೊಲ್ಲಲು ಬಳಕೆ ಮಾಡಲಾಗುತ್ತದೆ.
ದ್ರವದ ಮೇಲೆ ನಿರ್ವಾತವನ್ನು ಸೃಷ್ಠಿಸಿದ ಮೊದಲ ವ್ಯಕ್ತಿ ಯಾರು?
1643ರಲ್ಲಿ ಇವಾಜೆಲಿಸ್ಟಾ ಟಾರಿಸೆಲ್ಲಿ ಅವರು ದ್ರವದ ಮೇಲೆ ನಿರ್ವಾತವನ್ನು ಸೃಷ್ಟಿಸಿದರು. ಟಾರಿಸೆಲ್ಲಿ ಅವರು ಬಾರೋಮೀಟರ್ ಸಂಶೋಧಿಸಿದರು. ಬಾರೋಮೀಟರ್ ಗಾಳಿಯ ಒತ್ತಡವನ್ನು ಅಳೆಯುತ್ತದೆ. ಒತ್ತಡವನ್ನು ಅಳೆಯುವ ಅಂತರಾಷ್ಟ್ರೀಯ ಮಾನ 'ಪಾಸ್ಕಲ್'.
ಸೋಪಿನ ನೊರೆ ಒಳಗೆ ಒತ್ತಡ ಹೇಗಿರುತ್ತದೆ?
ಸೋಪಿನ ಗುಳ್ಳೆಯ ಒಳಗೆ ವಾತಾವರಣದ ಒತ್ತಡಕ್ಕಿಂತ ಹೆಚ್ಚಿನ ಒತ್ತಡವಿರುತ್ತದೆ. ಸೋಪಿನ ನೊರೆಯು ತೆಳುವಾದ ಪದರವಾಗಿದ್ದು, ವ್ಯತೀಕರಣದ ಮೂಲಕ ತನ್ನ ಮೇಲೆ ಬಿದ್ದ ಬೆಳಕನ್ನು ವಿವಿಧ ಬಣ್ಣಗಳಲ್ಲಿ ಹೊರಹಾಕುತ್ತದೆ.
ಗಾಡಿಯ ಚಕ್ರಕ್ಕೆ ಕಬ್ಬಿಣದ ಪಟ್ಟಿ ಬಿಸಿಯಾಗಿದ್ದಾಗ ಸೇರಿಸಲು ಕಾರಣವೇನು?
ಗಾಡಿಯ ಚಕ್ರಕ್ಕೆ ಕಬ್ಬಿಣದ ಪಟ್ಟಿಯನ್ನು ಸೇರಿಸುವಾಗ ಪಟ್ಟಿಯು ಬಹಳ ಬಿಸಿಯಾಗಿರುವಾಗ ಸೇರಿಸುತ್ತಾರೆ. ಇದರಿಂದ ಪಟ್ಟಿಯು ತಣ್ಣಗಾದಾಗ ಸಂಕುಚಿತಗೊಂಡು ಚಕ್ರಕ್ಕೆ ಬಿಗಿಯಾಗಿ ಹೊಂದಿಕೊಳ್ಳುತ್ತದೆ. ಇದು ಶಾಖದ ವಿಕಸನ ತತ್ವದ ಆಧಾರದ ಮೇಲೆ ಈ ಪ್ರಯೋಗ ಮಾಡಲಾಗುತ್ತದೆ.
ವಿಕಸನ ತತ್ವದ ನಿದರ್ಶನಗಳು
ಗಾಜಿನ ಜಾಡಿಯ ಲೋಹದ ಮುಚ್ಚಳ ಬಿಗಿಯಾಗಿದ್ದರೆ ಅದನ್ನು ಬಿಸಿ ನೀರಿನಿಂದ ಕಾಯಿಸಿದಾಗ ಮುಚ್ಚಳವು ಜಾಡಿಗಿಂತ ಹೆಚ್ಚು ವಿಕಾಸ ಹೊಂದುತ್ತದೆ. ಆದುದ್ದರಿಂದ ಮುಚ್ಚಳವನ್ನು ಸುಲಭವಾಗಿ ತೆಗೆಯಬಹುದು.
ರೈಲು ಕಂಬಿಗಳನ್ನು ಉದ್ದಕ್ಕೆ ಸೇರಿಸುವಾಗ ಎರಡು ಕಂಬಿಗಳು ಸೇರುವ ಜಾಗದಲ್ಲಿ ಸ್ವಲ್ಪ ಭಾಗ ಬಿಟ್ಟಿರುತ್ತಾರೆ. ಕಾರಣ ಇದರಿಂದ ಉಷ್ಣತೆಯಲ್ಲಿ ವ್ಯತ್ಯಾಸವಾದಾಗ ಕಂಬಿಗಳು ವಿಕಾಸಗೊಳ್ಳಲು & ಸಂಕುಚಿತಗೊಳ್ಳಲು ಸಹಕಾರಿಯಾಗುತ್ತದೆ.
ಬೇಸಿಗೆ ಕಾಲದಲ್ಲಿ ವಿದ್ಯುತ್ ತಂತಿಗಳು ವಿಕಸನಹೊಂದಿ ನೇತಾಡುತ್ತಿರುತ್ತವೆ.
0 Comments