ಕ್ರೆಸ್ಕೋಗ್ರಾಫ್ (Crescograph)
ಇದು ಸಸ್ಯಗಳ ಬೆಳವಣಿಗೆ ಅಳೆಯುವ ಸಾಧನವಾಗಿದೆ. ಇದನ್ನು ಭಾರತೀಯ ವಿಜ್ಞಾನಿ ಸರ್. ಜಗದೀಶ ಚಂದ್ರ ಬೋಸ್ರವರು ಸಂಶೋಧಿಸಿದರು. ಇವರು ರೇಡಿಯೋ ಮತ್ತು ಮೈಕ್ರೋವೇವ್ಸ್ ಆಪ್ಟಿಕ್ಸನ್ನು ಸಂಶೋಧಿಸಿದರು.
ಕ್ಷ-ಕಿರಣ (x-Ray)
ಜರ್ಮನಿ ಭೌತಶಾಸ್ತ್ರಜ್ಞ ವಿಲಿಯಂ ರಾಂಟೆಜೆನ್ರವರು ಕ್ಷ-ಕಿರಣವನ್ನು ಸಂಶೋಧಿಸಿದರು. ಈ ಸಂಶೋಧನೆಗಾಗಿ 1901ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. (ಇವರು ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದ ಮೊದಲಿಗರು) ಕ್ಷ-ಕಿರಣಗಳು ಕಡಿಮೆ ತರಂಗಾಂತರ ಹೊಂದಿದ್ದು, 0.01 ರಿಂದ 10 ನ್ಯಾನೋ ಮೀಟರ್ ಉದ್ದ ಹೊಂದಿದೆ.
ಕ್ಷ-ಕಿರಣಗಳು 3 X 1016 ರಿಂದ 3 X 1019 ಹರ್ಟ್ಜ್ ನಷ್ಟು ಆವೃತ್ತಿ ಹೊಂದಿದೆ. ವಿದ್ಯುತ್ - ಕಾಂತೀಯ ವಿಕಿರಣವಾದ ಕ್ಷ-ಕಿರಣವು ಮೆಡಿಕಲ್ ಇಮೇಜಿಂಗ್, ಎದೆ ಎಕ್ಸ್ರೇ, ಡೆಂಟಲ್ ರೇಡಿಯೋಗ್ರಾಫಿಯಲ್ಲೂ ಬಳಸಲಾಗುತ್ತದೆ.
ಟೆಲಿಸ್ಕೋಪ್ (Telescope)
ಜರ್ಮನ್ ಡಚ್ ಕನ್ನಡಕ ತಯಾರಕ ಹಾನ್ಸ್ ಲೆಪ್ರೆಸಿ ಅವರು ಟೆಲಿಸ್ಕೋಪ್ ತಯಾರಿಸಿದರು. ನಂತರದ ದಿನಗಳಲ್ಲಿ ಗೆಲಿಲಿಯೋ ಗೆಲಿಲಿ ಅಭಿವೃದ್ಧಿ ಪಡಿಸಿ ಬಳಕೆ ಮಾಡಿದನು.
ಸ್ಟೆತಾಸ್ಕೋಪ್ (Stethascope)
ಹೃದಯದ ಬಡಿತವನ್ನು ಪತ್ತೆ ಹಚ್ಚುವ ಸಾಧನವಾಗಿದೆ. ಇದನ್ನು ಫ್ರಾನ್ಸ್ ದೇಶದ ವೈದ್ಯ ರೆನೆಲೆನೆಕ್ ರವರು 1816ರಲ್ಲಿ ಸಂಶೋಧಿಸಿದರು.
ಬಾರೋಮೀಟರ್ (Barometer)
ಗಾಳಿಯ ಒತ್ತಡವನ್ನು ಅಳೆಯುವ ಸಾಧನ, ವಾಂಗೆಲೀಸ್ಟಾ ಟಾರೆಸೆಲ್ಲಿ ಎಂಬ ಇಟಲಿ ಭೌತಶಾಸ್ತ್ರಜ್ಞ ಸಂಶೋಧಿಸಿದರು. ಒತ್ತಡವನ್ನು ಅಳೆಯುವ ಮಾನ: ಪಾಸ್ಕಲ್.
ಥರ್ಮೋಮೀಟರ್ (Thermometer)
ತಾಪಮಾನವನ್ನು ಅಳೆಯುವ ವೈಜ್ಞಾನಿಕ ಸಾಧನ, ಗೆಲಿಲಿಯೋ ಗೆಲಿಲಿ ಎಂಬ ಇಟಲಿ ಭೌತಶಾಸ್ತ್ರಜ್ಞ ಸಂಶೋಧಿಸಿದರು.
ಪ್ಲಾಸ್ಟಿಕ್ ಸರ್ಜರಿ (Plastic Surgery)
ಭಾರತೀಯ ವೈದ್ಯ ಸುಶ್ರುತರವರು “ಪ್ಲಾಸ್ಟಿಕ್ ಸರ್ಜರಿಯ ವಿಧಾನ'ವನ್ನು ಸಂಶೋಧಿಸಿದರು. ವೈದ್ಯಕೀಯದ ಬಗ್ಗೆ ಸಾಂಪ್ರದಾಯಿಕ ಪಠ್ಯ ಒಳಗೊಂಡ ಗ್ರಂಥ ಸುಶ್ರುತ ಸಂಹಿತೆ ಬರೆದಿದ್ದಾರೆ. ಇವರನ್ನು ಭಾರತೀಯ ವೈದ್ಯಶಾಸ್ತ್ರದ ಪಿತಾಮಹ ಎನ್ನುವರು.
ಶುಷ್ಕಕೋಶ / ಲೆಕ್ಲಾಂಚೆ ಕೋಶ (Drycell)
ಇದನ್ನು 1887 ರಲ್ಲಿ ಜರ್ಮನ್ ವಿಜ್ಞಾನಿ ಕಾರ್ಲ್ಗಾಸ್ನೆನರ್ (Karl Gassner) ಅವರು ಅನ್ವೇಷಣೆ ಮಾಡಿದ್ದು, ಇದನ್ನು ಬ್ಯಾಟರಿಗಳಲ್ಲಿ ಬಳಸಲಾಗುತ್ತದೆ. ಇದರಿಂದ ಅನೇಕ ವಿದ್ಯುತ್ ಅನ್ವಯಗಳಿವೆ
ರಾಮನ್ ಪರಿಣಾಮ (Raman Effect)
ಭಾರತೀಯ ಭೌತಶಾಸ್ತ್ರಜ್ಞ ಸರ್. ಸಿ. ವಿ. ರಾಮನ್ರವರು ಪರಮಾಣುವಿನಲ್ಲಿರುವ ಪ್ರೋಟಾನ್ಗಳ ಚದುರುವಿಕೆ ಬಗ್ಗೆ ಸಂಶೋಧಿಸಿದ್ದಾರೆ. 1928 ಫೆಬ್ರವರಿ 28ರಂದು ಬೆಳಕಿನ ಚದುರುವಿಕೆ ಬಗ್ಗೆ ಸಂಶೋಧನೆ ನಡೆಸಿದರು. ಬೆಳಕಿನ ಚದುರುವಿಕೆ ಬಗ್ಗೆ ನಡೆಸಿದ ಸಂಶೋಧನೆ ದಿನವಾದ ಫೆಬ್ರವರಿ 28 ನ್ನು ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 1930ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸ್ಪಿಗ್ಮೋಮಾನೋ ಮೀಟರ್ (Sphygmomano meter)
ರಕ್ತದ ಒತ್ತಡವನ್ನು ಅಳೆಯುವ ಸಾಧನವಾಗಿದೆ. ಇದರಲ್ಲಿ ಪಾದರಸ ತುಂಬಿರುತ್ತಾರೆ. ಸಾಮಾನ್ಯವ್ಯಕ್ತಿ ರಕ್ತದೊತ್ತಡ 12/80 mmHg ಆಗಿದೆ. ಈ ಸಾಧನವನ್ನು ಸಮ್ಮೇಲ್ ಸಿಗ್ಪ್ರಿಡ್ ಕಾರ್ಲ್ರಿಟ್ಟರ್ ಎಂಬ ಆಸ್ಟ್ರೀಯನ್ - ಜೇವಿಸ್ ವೈದ್ಯ ಸಂಶೋಧಿಸಿದರು.
ಸಿಸ್ಮೋಮೀಟರ್ (Seismometer)
ಭೂಕಂಪನ ಅಲೆಗಳನ್ನು ಪತ್ತೆ ಹಚ್ಚುವ ಸಾಧನವಾಗಿದೆ. ಈ ಸಾಧನವನ್ನು 1842ರಲ್ಲಿ ಜೇಮ್ಸ್ ಡೇವಿಡ್ ಪ್ರೋಬ್ಸ್ ಸಂಶೋಧಿಸಿದರು. ಭೂಕಂಪನದ ಬಗ್ಗೆ ಅಧ್ಯಯನ ಮಾಡುವುದನ್ನು ಸಿಸ್ಮೊಲಜಿ ಎನ್ನುವರು. ಡೇವಿಡ್ ಪ್ರೋಬ್ಸ್ ಸಂಶೋಧಿಸಿದ ಸಾಧನವನ್ನು ಸಿಸ್ಮೋಮೀಟರ್ ಎಂಬ ಪದವನ್ನು ಠಂಕಿಸಿ ವರ್ಣಿಸಿದವರು : ಸ್ಕಾಟಿಷ್ ಜಿಯಾಲಜಿಸ್ಟ್ ಡೇವಿ ಮಿಲ್ನೆ
ರಿಕ್ಟರ್ಮಾನ (Richter Scale)
ಇದು ಭೂಕಂಪನದಿಂದ ಬಿಡುಗಡೆಯಾಗುವ ಶಕ್ತಿಯ ಪ್ರಮಾಣವನ್ನು ಸಂಖ್ಯೆ ರೂಪದಲ್ಲಿ ಪ್ರತಿನಿಧಿಸಿ ತೀವ್ರತೆ ತಿಳಿಸುತ್ತದೆ (Magnitude) ಇದನ್ನು ಬೇಸ್- 10 ಲಾಗರಿಥಮ್ ಸ್ಕೇಲ್ (Base-10 Logarithrmic Scale) 1935ರಲ್ಲಿ ಸಿಸ್ಮೋಲಜಿಸ್ಟ್ ಚಾರ್ಲ್ಸ್ ಫ್ರಾನ್ಸಿಸ್ ರಿಕ್ಟರ್ ಮತ್ತು ಬೆನೋ ಗುಟೆನ್ ಬರ್ಗ್ ಅಭಿವೃದ್ಧಿ ಪಡಿಸಿದರು.
ಡೈನಮೊ (Dynamo)
ಇದು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನವಾಗಿದೆ. ಡೈನಮೋವನ್ನು ಮೈಕೆಲ್ ಫ್ಯಾರಡೆ ಎಂಬ ಇಂಗ್ಲಿಷ್ ವಿಜ್ಞಾನಿ ಸಂಶೋಧಿಸಿದರು. ಮೈಕೆಲ್ ಫ್ಯಾರಡೆರವರು ಎಲೆಕ್ಟ್ರೊ ಮ್ಯಾಗ್ನೆಟಿಕ್ ಇಂಡಕ್ಷನ್, ಡೈಮಾಗ್ನೆಟಿಸಂ ಮತ್ತು ಎಲೆಕ್ಟ್ರೋಲೈಸಿಸ್ ಸಂಶೋಧಿಸಿದ್ದಾರೆ.
ಡೈನಮೈಟ್ (Dynamite)
ನೈಟ್ರೋ ಗ್ಲಿಸರಿನ್ ಆಧಾರಿತವಾದ ಸ್ಪೋಟಕ ವಸ್ತುವಾದ ಡೈನಮೈಟ್ ಅನ್ನು ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ ಆಲ್ಫ್ರೆಡ್ ನೊಬೆಲ್ ಸಂಶೋಧಿಸಿದರು. ಇವರ ಹೆಸರಿನಲ್ಲೇ ಆರು ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.
ಫೌಂಟೆನ್ಪೆನ್ (Fountain Pen)
ಗುರುತ್ವ ಮತ್ತು ಲೋಮನಾಳ ಕ್ರಿಯೆ ತತ್ವದ ಮೇಲೆ ಕಾರ್ಯನಿರ್ವಹಿಸುವ ಫೌಂಟೆನ್ ಪೆನ್ನ್ನು ಲೇವಿಸ್ ಎಡಸನ್ ವಾಟರ್ಮನ್ ಅವರು ಕಂಡು ಹಿಡಿದರು. ಇವರು ವಾಟರ್ಮನ್ ಪೆನ್ ಕಂಪನಿ ಸಂಸ್ಥಾಪಕರು.
ಇ.ಸಿ.ಜಿ. (Electro Cardiography)
ಇ.ಸಿ.ಜಿ. ಯು ಹೃದಯದ ವಿದ್ಯುತ್ ಚಟುವಟಿಕೆಯನ್ನು ದಾಖಲಿಸುವ ಸಾಧನವಾಗಿದೆ. ಮೊದಲ ಪ್ರಾಯೋಗಿಕ ಎಲೆಕ್ಟೋ ಕಾರ್ಡಿಯೋ ಗ್ರಾಂನ್ನು 1903ರಲ್ಲಿ ವಿಲೆಂ ಇನ್ತೊವಿನ್ (Willem Einthoven) ಎಂಬ ಡಚ್ ವೈದ್ಯ ಸಂಶೋಧಿಸಿದನು. ಈ ಸಂಶೋಧನೆಗಾಗಿ 1924ರಲ್ಲಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
ಬೈಸಿಕಲ್ (Bicycle)
ಬೈಸಿಕಲನ್ನು ನಿರ್ಮಿಸಿದವರು ಜರ್ಮನಿ ದೇಶದ ಸಂಶೋಧಕರಾದ ಕಾರ್ಲ್ಡ್ರೈಸ್ (KarlDrais), ನಂತರ ಕ್ರಿಕ್ ಪ್ಯಾಟ್ರಿಕ್ ಮ್ಯಾಕ್ ಮಿಲನ್ ಎಂಬ ಸ್ಕಾಟಿಷ್ ಸಂಶೋಧಕರು ಇದನ್ನು ಸುಧಾರಿಸಿ, ಕಾಲಿನಿಂದ ಓಡಿಸಬಹುದಾದ ಬೈಸಿಕಲ್ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮೊಬೈಲ್ ಫೋನ್ (Cell Phone)
ಮಾರ್ಟಿನ್ ಕೂಪರ್ ಎಂಬ ಅಮೆರಿಕ ಸಂಶೋಧಕ, ಇಂಜಿನಿಯರ್ ಮೊಬೈಲ್ ಫೋನ್ ಸಂಶೋಧಿಸಿದನು. ಇವರು 1973ರಲ್ಲಿ ಮೋಟೊರೊಲಾ ಕಂಪನಿಯ ಸೆಲ್ಫೋನ್ನ್ನು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಮೊದಲು ಬಳಕೆ ಸೆಲ್ಫೋನ್ 2 ಕೆ.ಜಿ ತೂಕ ಇತ್ತು. 1983ರಿಂದ ವಾಣಿಜ್ಯವಾಗಿ ಲಭ್ಯವಾಯಿತು. 1973ರ ಏಪ್ರಿಲ್ 4 ರಂದು ಕೂಪರ್ ಬಳಕೆ ಮಾಡಿದರು. ಕೂಪರ್ರವರು Father of the Cell Phone ಎನ್ನುವರು.
ಟೆಲಿಫೋನ್ (Telephone)
ಟೆಲಿಫೋನನ್ನು ಸ್ಕಾಟಿಷ್-ಅಮೆರಿಕನ್ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಾಂಬೆಲ್ ಸಂಶೋಧಿಸಿದರು. ಗ್ರಹಾಂಬೆಲ್ ಕಾರ್ಯನಿರ್ವಾಹಕ ಟೆಲಿಫೋನ್ನ್ನು ಕಂಡು ಹಿಡಿದರು. ಯಾವುದೇ ಶಬ್ದವನ್ನು ಕೇಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನವಾಗಿದೆ.
ಟೆಲಿಗ್ರಾಫಿ (Telegraphy)
ಟೆಲಿಗ್ರಾಫನ್ನು 1792ರಲ್ಲಿ ಸಿಮಿಪೊರೆ ಟೆಲಿಗ್ರಾಫ್ ಅಥವಾ ಆಪ್ಟಿಕಲ್ ಟೆಲಿಗ್ರಾಫ್ ಅನ್ನು ಫ್ರಾನ್ಸ್ ದೇಶದ ಸಂಶೋಧಕ ಕ್ಲಾಡ್ ಚಾಪ್ಪೆರವರು (Claude Chappe) ರವರು ಸಂಶೋಧಿಸಿದರು.
0 Comments