ಕಂಪ್ಯೂಟರ್ (Computer)
ಕಂಪ್ಯೂಟರ್ ಅಥವಾ ಗಣಕಯಂತ್ರವನ್ನು ಚಾರ್ಲ್ಸ್ ಬ್ಯಾಬೇಜ್ ಎಂಬ ಬ್ರಿಟಿಷ್ ವಿಜ್ಞಾನಿಯು ಸಂಶೋಧಿಸಿರು. ಮೊಟ್ಟ ಮೊದಲ ಡಿಜಿಟಲ್ ಕಂಪ್ಯೂಟರ್ನ್ನು ವಿನ್ಯಾಸ ಮಾಡಿದರು. ಈತ ಪ್ರೋಗ್ರಾಂ ಮಾಡಬಲ್ಲ ಕಂಪ್ಯೂಟರ್ಗಳ ವಿನ್ಯಾಸವನ್ನು 1834ರಲ್ಲಿ ರಚಿಸಿದರು. ಆದುದ್ದರಿಂದ ಚಾರ್ಲ್ಸ್ ಬ್ಯಾಬೇಜ್ನು ಗಣಕಯಂತ್ರದ ಪಿತಾಮಹ ಎನ್ನುವರು.
ವಿಮಾನ (Aeroplane)
ವಿಮಾನವನ್ನು ಅಮೆರಿಕದ ಇಬ್ಬರು ಸೋದರರಾದ ರೈಟ್ ಸೋದರರು 1903ರಲ್ಲಿ ವಿಮಾನ ಸಂಶೋಧಿಸಿದರು.
ದೂರದರ್ಶನ (Television)
ಟೆಲಿವಿಷನ್ನ್ನು ಜಾನ್ ಲೋಗಿ ಬ್ರೈಡ್ (John Logie Baird) ಎಂಬ ಸ್ಕಾಟ್ಲ್ಯಾಂಡ್ ದೇಶದ ಸಂಶೋಧಕ ಅನ್ವೇಷಿಸಿದನು. 1927ರಲ್ಲಿ 438 ಮೈಲಿ ಲಂಡನ್ ಮತ್ತು ಗ್ಲಾಸೊ ಮಧ್ಯೆ ಸಂಪರ್ಕ ಕಲ್ಪಿಸಿ ಪ್ರಸಾರ ಮಾಡುವ ಮೂಲಕ ಜಗತ್ತಿನಲ್ಲೇ ಅತಿ ದೂರದ ದೂರದರ್ಶನ ಪ್ರಸಾರ ಮಾಡಿದ ಮೊದಲ ಕಾರ್ಯಕ್ರಮವಾಯಿತು.
ರೇಡಿಯೋ (Radio)
ರೇಡಿಯೋವನ್ನು ಇಟಲಿ ಸಂಶೋಧಕ ಗುಗ್ಲಿಲ್ಮೊ ಮಾರ್ಕೋನಿ (Guglielmo Marconi) ಸಂಶೋಧಿಸಿದನು. 1909 ರಲ್ಲಿ ರೇಡಿಯೋ ಸಂಶೋಧನೆಗಾಗಿ ಮಾರ್ಕೋನಿ ಮತ್ತು ಮಾರ್ಕೋನಿಗೆ ರೇಡಿಯೋ ಸಂಶೋಧನೆಯಲ್ಲಿ ಸಹಕರಿಸಿದ ಕಾರ್ಲ್ ಫರ್ಡಿನಾಂಡ್ ಬ್ರೌನ್ರವರಿಗೆ ಜಂಟಿಯಾಗಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿದ್ಯುತ್ ಬಲ್ಬ್ (Electric Bulb)
ಥಾಮಸ್ ಅಲ್ವಾ ಎಡಿಸನ್ ಎಂಬ ಅಮೇರಿಕದ ಸಂಶೋಧಕನು ವಿದ್ಯುತ್ ಬಲ್ಬನ್ನು ಸಂಶೋಧಿಸಿದನು. ಅತಿ ಹೆಚ್ಚಿನ ದ್ರವನ ಬಿಂದು ಹಾಗೂ ವಿದ್ಯುತ್ ರೋಧ ಸಹಿಸಬಲ್ಲ ಟಂಗ್ಸ್ಟನ್ ತಂತಿ ಬಳಸಿ ವಿದ್ಯುತ್ ಬಲ್ಬನ್ನು ಪತ್ತೆ ಹಚ್ಚಿದ್ದಾರೆ. ವಿದ್ಯುತ್ ಬಲ್ಬ್ ಬುರುಡೆಯಲ್ಲಿ ಸಾರಜನಕ ಮತ್ತು ಆರ್ಗಾನ್ ಅನಿಲವನ್ನು ತುಂಬುತ್ತಾರೆ. ಥಾಮಸ್ ಆಲ್ವಾ ಎಡಿಸನ್ ಅವರು ನೇರ ವಿದ್ಯುತ್ (ಡೈರೆಕ್ಟ್ ಕರೆಂಟ್) ಅನ್ನು ಸಂಶೋಧಿಸಿದರು.
ರಕ್ತದ ಗುಂಪು (Blood Group)
ರಕ್ತದ ಗುಂಪನ್ನು ಕಾರ್ಲ್ ಲ್ಯಾಂಡ್ ಸ್ಟೇನರ್ ಎಂಬ ಆಸ್ಟ್ರಿಯಾ ದೇಶದ ವೈದ್ಯ ಮತ್ತು ಜೀವಶಾಸ್ತ್ರಜ್ಞ ಕ್ರಿ.ಶ. 1900ರಲ್ಲಿ ಸಂಶೋಧಿಸಿದನು. ಇವರು ರಕ್ತದ ಗುಂಪನ್ನು ಸಂಶೋಧಿಸಿದ್ದಕ್ಕಾಗಿ 1930ರಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಲ್ ಲ್ಯಾಂಡ್ ಸ್ಟೇನರ್ರವರ 1937ರಲ್ಲಿ ಆರ್.ಹೆಚ್. ಅಂಶಗಳನ್ನು ರಕ್ತದಲ್ಲಿ ಸಂಶೋಧಿಸಿದರು. 1909ರಲ್ಲಿ ಪೋಲಿಯೋ ವೈರಸ್ನ್ನು ಸಂಶೋಧಿಸಿದರು.
ಲೇಸರ್ (LASER)
ಥಿಮೋದರ್ ಮೈಮಾನ್ ಎಂಬ ಅಮೆರಿಕ ವಿಜ್ಞಾನಿ ಸಂಶೋಧಿಸಿದರು. LASER ನ ವಿಸ್ತ್ರತ ರೂಪ Light Amplification by Stimulated Emmission of Radiation (ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ).
ಪೆನ್ಸಿಲಿನ್ (Pencilin)
ಪೆನ್ಸಿಲಿನ್ ಎಂಬ ಜೀವ ನಿರೋಧಕ ಔಷಧಿಯನ್ನು ಅಲೆಗ್ಸಾಂಡರ್ ಪ್ಲೆಮಿಂಗ್ ಎಂಬ ಜೀವಶಾಸ್ತ್ರಜ್ಞ ಸಂಶೋಧಿಸಿದ್ದಾರೆ. ಪೆನ್ಸಿಲಿನ್ ನೋಟೊಟಂ (Pencilin Notatum) ಎಂಬ ಶಿಲೀಂಧ್ರದಿಂದ ಪೆನ್ಸಿಲಿನ್ನ್ನು ಪ್ರತ್ಯೇಕಿಸಿದರು. ಇವರ ಈ ಸಂಶೋಧನೆಗಾಗಿ ಅಲೆಗ್ಸಾಂಡರ್ ಪ್ಲೆಮಿಂಗ್ರವರಿಗೆ 1945ರಲ್ಲಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ದೊರಕಿದೆ.
ಜಲಾಂತರ್ಗಾಮಿ (Submarine)
ಇದನ್ನು ಜಾನ್ ಪಿ ಹಾಲೆಂಡ್ (ಐರ್ಲೆಂಡ್/ಅಮೆರಿಕ) ಎಂಬ ವಿಜ್ಞಾನಿ ಸಂಶೋಧಿಸಿದರು. ಸಬ್ಮೆರಿನ್ ಎಂಬ ಜಲನೌಕೆಯು ನೀರಿನೊಳಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 1914-18 ರವರೆಗೆ ನಡೆದ ಮೊದಲ ಮಹಾಯುದ್ಧ ಸಂದರ್ಭದಲ್ಲಿ ಬಳಸಲಾಯಿತು. ಭಾರತದ ಪರಮಾಣು ಚಾಲಿತ ಸಬ್ಮೆರೀನ್ : ಐಎನ್ಎಸ್ ಅರಿಹಂತ್
ಆರ್ಕ್ ಲ್ಯಾಂಪ್ (Arc-Lamp)
ಬ್ರಿಟನ್ ವಿಜ್ಞಾನಿ ಸರ್ ಹಂಪ್ರೆ ಡೇವಿ ರವರು ಆರ್ಕ್ ಲ್ಯಾಂಪ್ಅನ್ನು ಕಂಡು ಹಿಡಿದರು. ಇವುಗಳನ್ನು ಸರ್ಚ್ಲೈಟ್ಗಳಲ್ಲಿ, ಫಿಲ್ಮಂ ಪ್ರಾಜೆಕ್ಟ್ಗಳಲ್ಲಿ ಮತ್ತು ಫ್ಲಡ್ ಲೈಟ್ಸ್ಗಳಲ್ಲಿ ಬಳಸಲಾಗುತ್ತದೆ.
ಅಪ್ಟಿಕಲ್ ಫೈಬರ್ (Optical Fibers)
ಟೆಲಿಕಮ್ಯುನಿಕೇಷನ್ನಲ್ಲಿ ಬಳಸುವ ಈ ಗಾಜಿನ ದಾರದಂತಿರುವ ನಾರು ಗಾಜು, ಆಂತರಿಕ ಸಂಪೂರ್ಣ ಪ್ರತಿಫಲನ ಕಂಡು ಬರುತ್ತದೆ. ಫೈಬರ್ ಆಪ್ಟಿಕ್ಸ್ ಬಗ್ಗೆ ಭಾರತ ಮೂಲದ ನರಿಂದ್ರ ಸಿಂಗ್ ಕಪಾನಿ ಕೊಡುಗೆ ನೀಡಿದ್ದಾರೆ.
ಜೀವಕೋಶ (Cell)
ಜೀವಿಯ ಮೂಲಭೂತ ಘಟಕವಾದ ಜೀವಕೋಶವನ್ನು ಬ್ರಿಟಿಷ್ ಜೀವಶಾಸ್ತ್ರಜ್ಞ ರಾಬರ್ಟ್ ಹುಕ್ ಕ್ರಿ.ಶ. 1665 ರಲ್ಲಿ ಸಂಶೋಧಿಸಿದನು. ಕೋಶ ಸಿದ್ದಾಂತವನ್ನು ಮಾಥಿಸ್ ಜೋಕಾಬ್ ಶಿಲ್ಡನ್ ಮತ್ತು ಥಿಯೋಡೋರ್ ಶ್ವಾನ್ರವರು ಪ್ರತಿಪಾದಿಸಿದರು.
ಡಿ.ಎನ್.ಎ ರಚನೆ (DNA-Deoxyribonucleic acid)
ವರ್ಣತಂತುಗಳ ಗುಣಾಣುಗಳಲ್ಲಿರುವ ಡಿ.ಎನ್.ಎ ಯ ರಚನೆಯನ್ನು 1953ರಲ್ಲಿ ಅಮೆರಿಕದ ವಿಜ್ಞಾನಿ ಜೇಮ್ಸ್ ವ್ಯಾಟ್ಸ್ ಮತ್ತು ಫ್ರಾನ್ಸಿಸ್ ಕ್ರಿಕ್ ಎಂಬುವರು ಕಂಡು ಹಿಡಿದರು. ಇವರ ಈ ಸಂಶೋಧನೆಗಾಗಿ 1962ರಲ್ಲಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹೈಗ್ರೋಮೀಟರ್ (Hygrometer)
ವಾತಾವರಣದ ಗಾಳಿಯ ತೇವಾಂಶ (Humidity) ತಿಳಿಯಲು ಬಳಸುವ ಸಾಧನವಾಗಿದೆ. ಮೊದಲ ಪ್ರಾಯೋಗಿಕ ಹೈಗ್ರೋಮೀಟರ್ನ್ನು 1775ರಲ್ಲಿ ಸ್ವಿಸ್ ದೇಶದ ಜಾನ್ ಹೆನ್ರಿಚ್ ಲಂಬಾರ್ಟ್ರವರು ಸಂಶೋಧಿಸಿದರು.
ದ್ಯುತಿ ವಿದ್ಯುತ್ ಪರಿಣಾಮ (Photo Electric Effect)
ಜರ್ಮನ್ ಸಂಜಾತ ಅಮೇರಿಕನ್ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ರವರು ದ್ಯುತಿ ವಿದ್ಯುತ್ ಪರಿಣಾಮವನ್ನು ಸಂಶೋಧಿಸಿದರು. ಈ ಸಂಶೋಧನೆಗಾಗಿ 1921ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಐನ್ಸ್ಟೀನ್ರವರು ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಐನ್ಸ್ಟೀನ್ರವರು ಸಾಪೇಕ್ಷ ಸಿದ್ಧಾಂತ, ದ್ರವ್ಯರಾಶಿ ಮತ್ತು ಶಕ್ತಿಯ ಸಂಬಂಧ (E=mc2) ನಿರೂಪಕರು.
ಇನ್ಸುಲಿನ್ (Insulin)
ಮೇದೋಜೀರಕ ಗ್ರಂಥಿಯ ದ್ವೀಪಕಲ್ಪಗಳಲ್ಲಿನ ಬೀಟಾ ಕೋಶಗಳಲ್ಲಿ ಉತ್ಪತ್ತಿಯಾಗುವ ಪೆಪ್ಟೈಡ್ ಹಾರ್ಮೂನ್ ಆಗಿದ್ದು, ಇದು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿ ಗ್ಲುಕೋಸ್ ಮಟ್ಟ ನಿಯಂತ್ರಿಸದಿದ್ದರೆ “ಮಧುಮೇಹ ರೋಗ” ಬರುತ್ತದೆ. ಇನ್ಸುಲಿನ್ನ್ನು ಸಂಶೋಧಿಸಿ ಪ್ರತ್ಯೇಕಿಸಿದ್ದಕ್ಕಾಗಿ ಬ್ರಿಟನ್ ವಿಜ್ಞಾನಿ ಸರ್. ಫೆಡ್ರಿಕ್ ಗ್ರಾಂಟ್ ಬಾಂಟಿಂಗ್ ಮತ್ತು ಕೆನಡಾದ ಜಾನ್ ಜೇಮ್ ರಿಕಾರ್ಡ್ ಮ್ಯಾಕ್ ಲಿಯಡ್ಗೆ 1992ರಲ್ಲಿ ವೈದ್ಯಕೀಯ ಕ್ಷೇತ್ರ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೃತಕವಾಗಿಯೂ ಕೂಡ ಇನ್ಸುಲಿನ್ನ್ನು ತಯಾರಿಸಲಾಗುತ್ತಿದೆ. ಬಯೋಕಾನ್ ಸಂಸ್ಥೆಯು ಬೆಂಗಳೂರು ಮೂಲದ ಕಂಪನಿಯಾಗಿದ್ದು, ಈ ಕಂಪನಿಯು ಇನ್ಸುಲಿನ್ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ.
ನ್ಯೂಕ್ಲಿಕ್ ಆಮ್ಲ (Nuclic Acid)
ಜೀವಗಳ ವರ್ಣತಂತುಗಳಲ್ಲಿರುವ ಡಿ.ಎನ್.ಎ. ಮತ್ತು ಆರ್.ಎನ್.ಎ. ಹೊಂದಿರುವ ನ್ಯೂಕ್ಲಿಕ್ ಆಮ್ಲವನ್ನು 1869ರಲ್ಲಿ ಫೆಡ್ರಿಚ್ ಮಿಷರ್ (Priedrich Miescher) ಎಂಬ ಸ್ವಿಸ್ ವಿಜ್ಞಾನಿ ಸಂಶೋಧಿಸಿದರು.
ಇಂಡಿಯಾ ಅಕಾಡೆಮಿ ಆಫ್ ಸೈನ್ಸಸ್ (IAS)
ಇದನ್ನು ಬೆಂಗಳೂರು ಅಕಾಡೆಮಿ ಎಂದು ಕರೆಯಲಾಗುತ್ತದೆ. 1934 ರಲ್ಲಿ ಹೆಸರಾಂತ ಭೌತಶಾಸ್ತ್ರಜ್ಞ ಸರ್. ಸಿ.ವಿ. ರಾಮನ್ ಅವರು ಬೆಂಗಳೂರಿನಲ್ಲಿ ಸ್ಥಾಪಿಸಿದರು.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಇಂಡಿಯಾ (NASI)
1930 ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಡಾ|| ಮೇಘಾನಂದ ಸಹಾ ಅವರು ಸ್ಥಾಪಿಸಿದ್ದು, ಈ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇಂಡಿಯಾ ನ್ಯಾಷನಲ್ ಸೈನ್ಸ್ ಅಕಾಡೆಮಿ (INSA)
ನವದೆಹಲಿಯಲ್ಲಿ 1935 ರಲ್ಲಿ ಈ ಸಂಸ್ಥೆಯು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ & ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಫ್ ಇಂಡಿಯಾ ಸಭೆಯ ಪ್ರಸ್ತಾಪದನ್ವಯ ಸ್ಥಾಪಿತವಾಗಿದೆ.
0 Comments