ಕನಸುಗಳ ರಹಸ್ಯವೇನು ?

 ಕನಸುಗಳ ರಹಸ್ಯವೇನು ?

        

         ಪ್ರಪಂಚದಲ್ಲಿ ಕನಸು ಕಾಣದ ವ್ಯಕ್ತಿಯಿಲ್ಲ. ಆದರೆ ಈ ಕನಸು ಏನು? 'ಯಾಕೆ' ಬೀಳುತ್ತದೆ ? ಇದು ಮನೋವಿಜ್ಞಾನಿಗಳಿಗೆ ಇನ್ನೂ ಬಿಡಿಸಲಾರದ ಗಂಟಾಗಿದೆ.


        ದೈವವು ಕನಸಿನ ಮೂಲಕ ಶುಭ ಸಂಕೇತವನ್ನೂ ಹಾಗೂ ಒಂದೊಂದು ಸಾರಿ ದುಷ್ಟ ಆತ್ಮಗಳ ಮೂಲಕ ನಿರರ್ಥಕ, ಇಂದ್ರಜಾಲವನ್ನು ರಚಿಸಿ ಭಯಗೊಳಿಸಲು ಬರುತ್ತದೆಯೆಂದು ಪೂರ್ವದಲ್ಲಿ ನಂಬಲಾಗುತ್ತಿತ್ತು. ಆದರೆ ಎಲ್ಲಾ ಕನಸುಗಳೂ ನಿಜವಾಗುವುದಿಲ್ಲವೆನ್ನುವುದು ಅಂದಿನ ಜನಗಳಿಗೂ ಗೊತ್ತಿತ್ತು.

    ಕನಸಿನ ಅನುಭವ ಉಸಿರಾಡುವಷ್ಟು ಸ್ವಾಭಾವಿಕ ಕ್ರಿಯೆ, ಅದು ಆಳ ನಿದ್ರೆಯ ನಂತರ ಕೇವಲ ಕೆಲವು ಕ್ಷಣಗಳವರೆಗೆ ಮಾತ್ರ ಅನುಭವಕ್ಕೆ ಬರುತ್ತದೆ. ಎಂದು ಆಧುನಿಕ ಮನೋವಿಜ್ಞಾನಿಗಳು ತಿಳಿಸುತ್ತಾರೆ. ಆಳ ನಿದ್ರೆಯ ಸ್ಥಿತಿಯಲ್ಲಿ ಕನಸು ಕಾಣುವವನು ಚೇತನದಿಂದ ಅಚೇತನ ಪ್ರಪಂಚಕ್ಕೆ ಹೋಗಿ ಅಲ್ಲಿ ಅವನು ಜಾಗರಣೆಯ ಸ್ಥಿತಿಯಂತೆ ಕಾಣುತ್ತಾನೆ, ಕೇಳುತ್ತಾನೆ ಮತ್ತು ಅನುಭವಿಸುತ್ತಾನೆ. ಸ್ವಪ್ನಾವಸ್ಥೆಯಲ್ಲಿ ಮನುಷ್ಯನ ಮನಸ್ಸು, ಸ್ಥಾನ ಮತ್ತು ಕಾಲದ ಸೀಮೆಗಳನ್ನು ದಾಟಿ ಹೋಗುತ್ತದೆ.

    ಆಧುನಿಕ ದುನೋವಿಜ್ಞಾನಿಗಳ ಪ್ರಕಾರ ಕನಸು ಯಥಾರ್ಥ ಜಗತ್ತಿನ ವಿಸ್ಮರ ಅಥವಾ ಸ್ಮೃತ ಅತೃಪ್ತ ಕಾಮನೆಗಳ ರೂಪ. ಜಾಗ್ರತಾವಸ್ಥೆಯಲ್ಲಿ ಪ್ರತಿಯೊಬ್ಬನ ಬೇರೆ ಬೇರೆ ಆಸೆ, ಅನುಭವಗಳಿದ್ದಂತೆಯೇ ಪ್ರತಿಯೊಬ್ಬನ ವೈಯಕ್ತಿಕ ಅನುಭವಗಳಿಂದ ಪ್ರಭಾವಿತಗೊಂಡ ಕನಸೂ ಬೇರೆ ಬೇರೆಯಾಗಿರುತ್ತದೆ. ಪುರುಷನಿಗಿಂತ ಸ್ತ್ರೀಯರು, ಅಶಿಕ್ಷಿತ ವ್ಯಕ್ತಿಗಿಂತ ವಿಚಾರವಂತ ಮತ್ತು ಆರೋಗ್ಯವಂತನಿಗಿಂತ ರೋಗಿ ವ್ಯಕ್ತಿ ಹೆಚ್ಚು ಕನಸು ಕಾಣುತ್ತಾನೆ ಎಂದು ಮನೋ ವಿಜ್ಞಾನಿಗಳು ತಿಳಿಯುತ್ತಾರೆ. ಮಕ್ಕಳ ಕನಸು ತುಂಬಾ ಸರಳವಾಗಿರುತ್ತದೆ.

    ಎಲ್ಲಾ ಕನಸುಗಳಿಗೂ ಮನೋವಿಜ್ಞಾನವೇ ಕಾರಣವಲ್ಲ. ವಿಶೇಷ ಶಾರೀರಕ ಸ್ಥಿತಿಯಿಂದಾಗಿಯೂ ಕನಸುಗಳು ಬೀಳುತ್ತವೆ. ಉದಾಹರಣೆಗೆ, ಎದೆ ಮೇಲೆ ಕೈಯಿಟ್ಟು ಅಂಗಾತ ಮಲಗುವುದು, ಹೆಚ್ಚು ತಿಂದು ಮಲಗುವುದು ಅಥವಾ ಮಾದಕ ಪದಾರ್ಥಗಳನ್ನು ಸೇವಿಸುವುದೂ ಕನಸು ಬೀಳುವುದಕ್ಕೆ ಕಾರಣ, ಸೈನ್ ಪೋರ್ಡ್ ವಿಶ್ವವಿದ್ಯಾಲಯದ ಡಾ|| ಏಲಿಯಮ್ ಡಿ, ಮೆಂಟರ ಅಭಿಪ್ರಾಯದಂತೆ, “ವಿಶೇಷ ಶಾರೀರಕ ಸ್ಥಿತಿಯಲ್ಲಿ ಮಾನವನ ಶರೀರದಲ್ಲಿ ಒಂದು ವಿಶೇಷ ರೀತಿಯ 'ವಿಷ' ಉತ್ಪತ್ತಿಯಾಗುತ್ತದೆ. ಅದರಿಂದಾಗಿ ಕನಸು ಬೀಳುತ್ತದೆ. ಅಂದರೆ ಶರೀರ ಆ ‘ವಿಷ'ದಿಂದ ತನ್ನನ್ನು ತಾನೇ ಬಿಡುಗಡೆ ಮಾಡಿಕೊಳ್ಳುತ್ತದೆ.

    ಮನೋವಿಜ್ಞಾನಿಗಳು ಇಲ್ಲಿಯವರೆಗೆ ಮೂಡಿರುವ ಕನಸಿಗೆ ಸಂಬಂಧಪಟ್ಟ ಸಿದ್ಧಾಂತಗಳಿಂದ ಎಲ್ಲಾ ರೀತಿಯ ಕನಸುಗಳನ್ನು ವಿಶ್ಲೇಷಿಸುವುದು ಸಾಧ್ಯವಿಲ್ಲ. ಉದಾಹರಣೆಗೆ 'ಫೆಟ್' ಎಂಬ ಪತ್ರಿಕೆಯ ಬಾತ್ಮಿದಾರನಾದ ಟೆಡ್ ಸ್ಮಾಇಲೀಯು 22 ಡಿಸೆಂಬರ್ 1942 ರಂದು ಒಂದು ಕನಸು ಕಂಡ . ಸುಮಾರು ರಾತ್ರಿ ಒಂದು ಗಂಟೆಗೆ ಅವನು ಎಚ್ಚೆತ್ತ : ಎದ್ದವನೇ ತನ್ನ ಹೆಂಡತಿಗೆ, “ನೀನು ಆಪತ್ಕಾಲದಲ್ಲಿ ಬಾರಿಸುವ ಬ್ಯೂಗಲ್ ಕೇಳಿದೆಯಾ ?” ಎಂದು ವಿಚಾರಿಸಿದ. ಹೆಂಡತಿ ನಾನೇನೂ ಕೇಳಲಿಲ್ಲ ಎಂದಳು. ಆಗ ಅವನು ತನ್ನ ಕನಸನ್ನು ಹೆಂಡತಿಗೆ ಹೇಳಿದ, “ನಾನೊಂದು ' ಬಸ್ಸಿನಲ್ಲಿ ಕೂತು ನನ್ನ ಕೆಲಸಕ್ಕೆ ಹೋಗುತ್ತಿದ್ದೆ. ಒಂದು ದೊಡ್ಡ ಹೋಟೆಲಿನ ಹತ್ತಿರ ಬಂದಾಗ ಆಕಾಶದಲ್ಲಿ ಬೆಂಕಿಯ ಜ್ವಾಲೆ ಹರಡುತ್ತಿರುವುದನ್ನು ಕಂಡೆ. ಬೆಂಕಿಯ ತೀವ್ರತೆಯನ್ನು ನೋಡಿ, ನಾನೊಂದು ಎತ್ತರವಾದ ಜಾಗದ ಮೇಲೆ ಹತ್ತಿದೆ. ಅಲ್ಲಿಂದ ಒಂದು ಔದ್ಯೋಗಿಕ ನಗರ ಬೆಂಕಿಗೆ ಬಲಿಯಾದುದ್ದನ್ನು ನೋಡಿದೆ. ಕೆಲವು ಅಮೆರಿಕನ್ನರು ಪಂಪಿನಿಂದ ಬೆಂಕಿ ಅರಿಸಲು ಪ್ರಯತ್ನಿಸುತ್ತಿದ್ದರು. ಒಬ್ಬ ಫ್ರೆಂಚ್ ನಾವಿಕ ಏನೋ ಆಜ್ಞೆ ಮಾಡುತ್ತಿದ್ದ.”

    ಕನಸಿನ ಘಟನೆ ಹೇಳಿದ ಮೇಲೆ ಟೆಡ್‌ಗೆ ಮತ್ತೆ ಮಲಗಲು ಸಾಧ್ಯವಾಗಲಿಲ್ಲ. ಅವನು ಕೂಡಲೇ ಅಸೋಶಿಯೇಟೆಡ್ ಪ್ರೆಸ್‌ನ ಕಾರ್ಯಾಲಯಕ್ಕೆ ಫೋನ್ ಮಾಡಿ ನಗರದಲ್ಲಿ ಎಲ್ಲಿಯಾದರೂ ಬೆಂಕಿ ಬಿದ್ದಿದೆಯಾ ಎಂದು ವಿಚಾರಿಸಿದ. ಬೆಂಕಿ ಎಲ್ಲೂ ಬಿದ್ದಿಲ್ಲವೆಂದು ಉತ್ತರ ಬಂತು. 

    ಮಾರನೇ ದಿನ ಪ್ರಾತಃಕಾಲ ಟೆಡ್‌ಗೆ ಅಕಸ್ಮಾತ್ ರೇಡಿಯೋ ಕೇಳಲು ಅಂತಃ ಪ್ರೇರಣೆಯಾಯಿತು. ಆಗಲೇ ರೇಡಿಯೋ, ಭಾಷಣ 'ಬೆಂಕಿಯ ದುರ್ಘಟನೆ' ಬಗ್ಗೆ ಸಮಾಚಾರ ಬಿತ್ತರಿಸುತ್ತಿತ್ತು. ಟೆಡ್ ತಕ್ಷಣ ಬಸ್ ಹಿಡಿದು 'ಫ್ಲಾವರ್ ಹೋಟೆಲ್ ಹತ್ತಿರ ಬಂದ. ಅಲ್ಲಿಂದ ಅವನ ಸ್ನೇಹಿತನೊಬ್ಬ ಅವನನ್ನು ಒಂದು ಎತ್ತರವಾದ ಸ್ಥಳಕ್ಕೆ ಕರೆದೊಯ್ದು. ಅಲ್ಲಿ ನಿಂತು ಟೆಡ್ ತಾನು ಕನಸಲ್ಲಿ ಕಂಡ ದೃಶ್ಯವನ್ನೇ ಕಂಡ

    ಕನಸುಗಳನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ವ್ಯಕ್ತಿಯು ತನ್ನ ಸ್ಥೂಲ ಕಣ್ಣುಗಳಿಂದ ಈ ಮೊದಲು ನೋಡದ ಅಥವಾ ನೋಡಲಾರದ ಭವಿಷ್ಯ ಅಥವಾ ವರ್ತಮಾನದ ಘಟನೆ ಈ ರೀತಿಯ ಕನಸುಗಳು ಮುಂಬರುವ ಘಟನೆಗಳ ಆಭಾಸ ಕೊಟ್ಟು, ಜನರನ್ನು ಎಚ್ಚರಿಸಿದೆ. ಕೆಳಗೆ ಪೂರ್ವಾಭಾಸ ಕೊಡುವ ವಿಭಿನ್ನ ರೀತಿಯ ಕನಸುಗಳ ವರ್ಣನೆಯನ್ನು ಮಾಡಲಾಗಿದೆ.

1.ಮೃತ್ಯುವಿನ ಬಗ್ಗೆ ಪೂರ್ವಾಭಾಸ : 

    ಅಮೆರಿಕದ ರಾಷ್ಟ್ರಪತಿ ಅಬ್ರಹಾಮ ಲಿಂಕನ್ನರು ಉಚ್ಚಾಧಿಕಾರಿಗಳ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದರು. ಅವರ ಭಾಷಣ ಕೇಳಿ, ಲಿಂಕನ್ನರು ಈ ಪ್ರಪಂಚದಿಂದ ಅಗಲಿದ್ದಾರೆ ಎಂಬ ಆಭಾಸ ಅಲ್ಲಿ ನೆರೆದಿದ್ದ. ಜನರಿಗೆ ಉಂಟಾಯಿತು. ವಾಸ್ತವವಾಗಿ, ಲಿಂಕನ್ನರಿಗೆ ಆ ಹಿ೦ದಿನ ದಿನವೇ ತಮ್ಮ ಸಾವಿನ ಪೂರ್ವಾಭಾಸವಾಗಿತ್ತು. ತಮ್ಮನ್ನು ಯಾರೋ ಗುಂಡಿನಿಂದ ಹೊಡೆದು, ತನ್ನ ಶವವನ್ನು ವೈಟ್ ಹೌಸಿನ ಒಂದು ಶವ ಪೆಟ್ಟಿಗೆಯಲ್ಲಿ ಇಟ್ಟಿರುವಂತೆ ಅವರು ಕನಸು ಕಂಡಿದ್ದರು. 

    (John Wilkes) ವಿಲೈಸ್ ಬೂಥ್ ಎಂಬುವವನು 14 ಏಪ್ರಿಲ್ 1864 ರಂದು ಗುಂಡು ಹೊಡೆದು ಲಿಂಕನ್ನರನ್ನು ಕೊಂದ ವಿಚಾರ ಎಲ್ಲರಿಗೂ ತಿಳಿದೇ ಇದೆ.

2. ದುರ್ಘಟನೆ ಬಗ್ಗೆ ಪೂರ್ವಾಭಾಸ : 

    ಕನಸುಗಳ ಮೂಲಕ ಎಷ್ಟೋ ವಿಚಿತ್ರ ವಿಸ್ಮಯಕಾರಿ ಸೂಚನೆಗಳ ಪೂರ್ವಾಭಾಸವಾಗುತ್ತದೆ. ಲಾರ್ಡ್ ಡಫರಿನ್ನರು ತಾವು ಸತ್ತು ಹೋಗಿರುವಂತೆ ಕನಸು ಕಂಡಿದ್ದರು ; ತಮ್ಮ ಶವವನ್ನು ಸ್ಮಶಾನದವರೆಗೆ ಒಂದು ಗಾಡಿಯಲ್ಲಿ ಕೊಂಡೊಯುತ್ತಿರವಾಗ ಲಾರ್ಡ್ ಡಫರಿನ್ನರು ಗಾಡಿ ಒಯುವವನ ಮುಖವನ್ನು ಗಮನದಲ್ಲಿಟ್ಟು ಕನಸಿನಲ್ಲಿ ನೋಡಿದ್ದರು. 

    ಒಂದು ದಿನ ಲಾರ್ಡ್ ಡಫರಿನ್ನರು 'ಲಿಪ್ಟ್ ' ಹತ್ತುವಾಗ ಅಕಸ್ಮಾತ್ ಲಿಪ್ಟ್ ಆಪರೇಟರಿನ ಮುಖ ಕಂಡು ಬೆಚ್ಚಿದರು. ಅವರು ಕನಸಿನಲ್ಲಿ ಕಂಡ ವ್ಯಕ್ತಿಯ ಮುಖಕ್ಕೂ ಇವನಿಗೂ ಯಾವ ವ್ಯತ್ಯಾಸವೂ ಇರಲಿಲ್ಲ. ಎಚ್ಚರಿಕ ದೃಷ್ಟಿಯಿಂದ ಡಫರಿನ್ನರು ತಕ್ಷಣ ಲಿಪ್ಟ್ ನಿಂದ ಕೆಳಗಿಳಿದರು. ಸ್ವಲ್ಪ ಹೊತ್ತಾದ ಮೇಲೆ ಲಿಪ್ಟ್ ಮೇಲೆ ಹೋಗಲಾರಂಭಿಸಿತು.. ಆದರೆ ಆಗಲೇ ಲಿಪ್ಟ್ ಕಡಿದು ಬಿದ್ದು ಅದರಲ್ಲಿದ್ದ ವ್ಯಕ್ತಿಗಳೆಲ್ಲ ಸತ್ತು ಹೋದರು,

3.ಅಪರಾಧಿಯನ್ನು ಹಿಡಿಸುವುದರ ಬಗ್ಗೆ ಕನಸು : ಮರ್ಡಾಕ್ ಗ್ರಾಂಟ್ ಎಂಬ ಟ್ರಾವಲಿಂಗ್ ಏಜೆಂಟನ ಶವ ಒಂದು ಸರೋವರದ ಬಳಿ ಸಿಕ್ಕಿತು. ತುಂಬಾ ಹಣ ಹಿಡಿದು ಹೋಗುತ್ತಿರುವಾಗ ಯಾರೋ ಅವನನ್ನು « ಹೊಡೆದು ಸರೋವರದ ಬಳಿ ಹಾಕಿ ಹಣ ದೋಚಿಕೊಂಡು ಓಡಿದ್ದರು. ಪೋಲೀಸರಿಗೆ ಯಾರ ವಿರುದ್ಧವಾಗಿಯೂ ಸರಿಯಾದ ಆಧಾರ ಸಿಗಲಿಲ್ಲ. ಕೆಲವು ದಿನಗಳಾದ ಮೇಲೆ ಮೃತ ಆತ್ಮ ಒಬ್ಬ ದರ್ಜೆಗೆ, - “ತನ್ನನ್ನು ಮೆಕಾಲ್ಡ್ ಎಂಬುವವನು ಕೊಂದಿದ್ದಾನೆ. ದೋಚಿದ ಹಣವನ್ನು ತನ್ನ ಮನೆಯ ಕಲ್ಲುಗಳ ನಡುವೆ ಬಚ್ಚಿಟ್ಟಿದ್ದಾನೆ” ಎಂದು ಹೇಳಿತು. ಪೋಲೀಸರ ಮೂಲಕ ಪರೀಕ್ಷಿಸಿದಾಗ ' ಕನಸಿನ ದೃಶ್ಯದಂತೆಯೇ ಹಣ ಬಚ್ಚಿಟ್ಟಿದ್ದು ಸಿಕ್ಕಿತು. ಮೆಕಾಲ್ಡ್ ಅಪರಾಧವನ್ನು ಒಪ್ಪಿಕೊಂಡ. 

    ಸ್ವಪ್ನಾವಸ್ಥೆಯಲ್ಲಿ ಭವಿಷ್ಯದಲ್ಲಾಗುವ ಘಟನೆಗಳ ಪೂರ್ವಾಭಾವ ಹೇಗಾಗುತ್ತದೆ ? ಇದಕ್ಕೆ ಸಮಾಧಾನವನ್ನು ಡಾ|| ಕ್ಲೀಟ್ ಮೆನ್‌ರು ಇಲೆಕ್ಟ್ರಾನಿಕ್ ಫಲೋಗ್ರಾಮ ಯಂತ್ರದ ಸಹಾಯದಿಂದ ಮಾಡುತ್ತಾ “ಮನುಷ್ಯನ ನಿದ್ದೆ ಪೂರ್ಣವಿದ್ದಷ್ಟು, ಕನಸು ಜೀವನದ ರಹಸ್ಯಗಳಿಂದ ಅಷ್ಟೇ ಸಂಬಂಧಿತವಾಗಿರುತ್ತದೆ. ಯೆಂದು ಕಾಣಿಸುತ್ತದೆ.” ಎಂದು ಸಿದ್ಧಪಡಿಸಿದ್ದಾರೆ. ಬ್ರಾಹ್ಮ ಮುಹೂರ್ತಕ್ಕಿಂತ ಪೂರ್ವದ ಸ್ವಚ್ಛ ವಾತಾವರಣದಲ್ಲಿ ಬೀಳುವ ಕನಸುಗಳು ಸಾಮಾನ್ಯವಾಗಿ ಸತ್ಯ ಘಟನೆಗಳ ಪೂರ್ವಾಭ್ಯಾಸವನ್ನು ಸೂಚಿಸುತ್ತದೆ. ಭಾರತೀಯ ದರ್ಶನ ಶಾಸ್ತ್ರಾನುಸಾರ, ಭವಿಷ್ಯದ ಘಟನೆಗಳ ಆಭಾಸವು, ಪವಿತ್ರ ಆತ್ಮ ಮತ್ತು ಅಂತಃಕರಣವುಳ್ಳವರಿಗೆ ಮಾತ್ರವಾಗುತ್ತದೆ. ರೋಗಗಳ ಬಗ್ಗೆ ಬಿದ್ದ ಪೂರ್ವಾಭಾಸ ' ಕನಸುಗಳ ಬಗ್ಗೆ ಮನೋವಿಜ್ಞಾನಿಗಳು, “ಆರೋಗ್ಯ ಹಾಳಾಗುವುದಕ್ಕೆ ಮೊದಲು ಶರೀರದಲ್ಲಿ ಆಂತರಿಕ ವೈಷಮ್ಯ ಉತ್ಪನ್ನವಾಗುತ್ತದೆ. ಪರಿಣಾಮವಾಗಿ, ಅವಚೇತನ ಮನಸ್ಸಿಗೆ ಭಾವೀರೋಗದ ಸೂಚನೆಗಳು ತಿಳಿಯುತ್ತವೆ'ಯೆಂದು ಹೇಳುತ್ತಾರೆ.


    ಇನ್ನೊಂದು ರೀತಿಯ ಕನಸುಗಳಲ್ಲಿ, ವ್ಯಕ್ತಿಯು ಭಿನ್ನ ಭಿನ್ನ ಪ್ರತೀಕ ಮತ್ತು ಘಟನೆಗಳ ಮೂಲಕ ಅಸ್ತವ್ಯಸ್ತ ವಿಚಾರಗಳನ್ನು ಕಾಣುತ್ತಾನೆ. ಒಂದೊಂದು ಸಾರಿ, ವಿಶೇಷ ಶಾರೀರಕ ಸ್ಥಿತಿಯಲ್ಲಿ ಅಕ್ಕ ಪಕ್ಕದ ವಾತಾವರಣವು ಕನಸಿನಲ್ಲಿ? ಕಾಣುತ್ತದೆ. ಒಂದು ದಿನ ಮುಸ್ಟರ್‌ ಮೇರೆ, ಫ್ರಾಂಸ್ ರಾಜ್ಯ ಕ್ರಾಂತಿಯ ಬಗ್ಗೆ ಒಂದು ಪುಸ್ತಕ ಓದುತ್ತಾ ನಿದ್ದೆ ಹೋದರು. ಅವರ ಕನಸಿನಲ್ಲಿ ಕ್ರಾಂತಿಯ ಬಗ್ಗೆ ದೃಶ್ಯ ಕಂಡರು. ಅವರ ಮೇಲೆ ಭೀಷಣ ಆರೋಪ ಹೊರಿಸಿ ಅವರನ್ನು ಸೆರೆ ಹಿಡಿಯಲಾಗುತ್ತದೆ ; ನ್ಯಾಯಾಧೀಶರು ಅವರನ್ನು ದೋಷಿಯೆಂದು ಬಗೆದು ಅವರ ತಲೆ ಕಡಿಯಲು ಆಜ್ಞೆ ಮಾಡುತ್ತಾರೆ. ಕೂಡಲೇ ಕತ್ತಿಯ ಅಲಗು ಮೋರೆಯ ಕತ್ತಿನ ಮೇಲೆ ಪ್ರಹಾರ ಮಾಡುತ್ತದೆ. ತನ್ನ ಕತ್ತಿನ ಮೇಲೆ ಯಾವುದೋ ಶಿಥಿಲ ವಸ್ತುವಿನ ಸ್ಪರ್ಶ ಅನುಭವಿಸಿ ತಕ್ಷಣ ಮೋರೆ ಗಾಬರಿಯಿಂದ ಎದ್ದು ಕೂಡುತ್ತಾರೆ. ಆದರೆ ಅವರು ಮಲಗಿದ್ದ ಮಂಚದ ಮೇಲಿರುವ ಸೊಳ್ಳೆಪರದೆಯ ' ಒಂದು ದಾರ' ರಾತ್ರಿಯ ಶೀತದಿಂದಾಗಿ ಭಂಡಿ ಹಿಡಿದು ಅವರ ಕತ್ತಿನ ಮೇಲೆ ಬಿದ್ದಿತ್ತು . 

    ಮೂರನೇ ರೀತಿಯ ಕನಸು, ವ್ಯಕ್ತಿಯ, ವಿಭಿನ್ನ ಅಪೂರ್ಣ ಇಚ್ಛೆಗಳ ಅಭಿ ವ್ಯಕ್ತಿಯ ರೂಪದಲ್ಲಿ ಬೀಳುತ್ತವೆ. ಈ ರೀತಿಯ ಕನಸುಗಳಲ್ಲಿ ಅಸಂತುಷ್ಟ ಕಾಮನೆಗಳೇ ಅನೇಕ ರೂಪಗಳಲ್ಲಿ ತೃಪ್ತಿ ಪಡೆಯುತ್ತವೆ. ಓರ್ವ ಯುವಕ ಪದೇ- ಪದೇ ತನ್ನ ಚಿಕ್ಕಪ್ಪ ಸತ್ತ೦ತೆಯ, ಅವನ ಆಸ್ತಿ ತನಗೆ ಸಿಕ್ಕಿರುವಂತೆಯೂ ಕನಸು ಕಾಣುತ್ತಿದ್ದ ವಾಸ್ತವವಾಗಿ ಆ ಯುವಕನ ಚಿಕ್ಕಪ್ಪ ಸತ್ತು ಸಾಕಷ್ಟು ಸಮಯವಾಗಿತ್ತು. ಮನೋವಿಶ್ಲೇ ಷಣೆ ಮಾಡಿದಾಗ, ಚಿಕ್ಕಪ್ಪನ ಸಾವಿನ ಮೂಲಕ ಅವನು ತನ್ನ ತಂದೆಯ ಸಾವನ್ನು ಬಯಸುತ್ತಿದ್ದಾನೆಂದು ತಿಳಿದು ಬಂತು, ಆರ್ಥಿಕವಾಗಿ ಅಡ್ಡಿ ಬಂದಾಗಲೇ ಯುವಕನಿಗೆ ಈ ರೀತಿಯ ಕನಸು ಬೀಳುತ್ತಿತ್ತು. ಯಾಕೆಂದರೆ ಅವನ ಅಪ್ಪ ಅವನ ಖರ್ಚಿಗೆ ದುಡ್ಡು ಕೊಡುತ್ತಿರಲಿಲ್ಲ. ತನ್ನ ಅತೃಪ್ತ ಇಚ್ಛೆಯ ಪೂರ್ತಿಗಾಗಿ ಯುವಕನ ಅವಚೇತನ ಮನಸ್ಸು ತಂದೆಯ ಸಾವನ್ನು ಬಯಸುತ್ತಿತ್ತು.

    ಆದರೂ ಕನಸೇನು ? ಅದರಿಂದ ಮಾನವನಿಗೆ ಏನು ಮಹತ್ವವಿದೆ ? ಎಂಬ ಪ್ರಶ್ನೆಗಳಗೆ ಇನ್ನೂ ಮನೋವಿಜ್ಞಾನಿಗಳು ಯಾವ ನಿಷ್ಕರ್ಷೆಗೂ ಬಂದಿಲ್ಲ. ಜ್ಞಾನದ ವಿಸ್ತಾರದೊಂದಿಗೆ ಮಾನವ ಒಂದಲ್ಲ ಒಂದು ದಿನ ಸ್ವಪ್ನ ಜಗತ್ತಿನ ರಹಸ್ಯಗಳನ್ನು ಭೇದಿಸುವುದರಲ್ಲಿ ಸಫಲನಾಗುವ ಕಾಲ ಬರಬಹುದು.


Post a Comment

0 Comments