ಮಹಾಲಿಂಗಪುರ - ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡಣೆ, ನೇತ್ರ ತಪಾಸಣೆ (ಮಸೂರ ಅಳವಡಿಕೆ)

ನಾಳೆ ಉಚಿತ ಆರೋಗ್ಯ ಶಿಬಿರ




ಮಹಾಲಿಂಗಪುರ :.ಎಂ. ಹುರಕಡ್ಡಿ ಫೌಂಡೇಶನ್ವತಿಯಿಂದ ಲಿಂ। ಮಹಾದೇವಪ್ಪ ಹುರಕಡ್ಡಿ, ಲಿಂ ಶಾಂತವ್ವ ಮ.ಹುರಕಡ್ಲಿ ಸ್ಮರಣಾರ್ಥ ಹಾನಗಲ್ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಂಯುಕ್ತಾಶ್ರಯದಲ್ಲಿಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಡಿ. 6ಮತ್ತು 7ರಂದು ಉಚಿತ ಆರೋಗ್ಯ ಶಿಬಿರ ನಡೆಯಲಿದೆ ಎಂದು ಫೌಂಡೇಶನ್ ಅಧ್ಯಕ್ಷ ಚನಬಸು ಹುರಕಡ್ಡಿ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು.6ರಂದು ಬುಧವಾರ ಬೆಳಗ್ಗೆ 9ಗಂಟೆಗೆ ರಕ್ತದಾನ ಶಿಬಿರ ಮತ್ತು ಅಂಗವಿಕಲರಿಗೆ ಕೃತಕ ಕೈ ಕಾಲು ಜೋಡಣೆ, ನೇತ್ರ ತಪಾಸಣೆ (ಮಸೂರ ಅಳವಡಿಕೆ),ಕಿವಿ, ಮೂಗು, ಗಂಟಲು ತಪಾಸಣೆ ಮತ್ತು ಹೊನ್ನಾವರ ವೈದ್ಯ ಪ್ರಕಾಶ್ ರಾಯಸ್ ಅವರು ಕ್ಯಾನ್ಸರ್, ಬಿಪಿ, ಶುಗರ್, ಗಂಟಲು ಬಾವು, ದೇಹದ ಗಂಟು ಇವುಗಳಿಗೆ ಆರ್ಯುವೇದ ಚಿಕಿತ್ಸೆ ನೀಡಲಿದ್ದಾರೆ. ಕಳೆದ ನವಂಬರ 22ರಂದು ಅಳತೆ ನೀಡಿದ ಫಲಾನುಭವಿಗಳಿಗೆ ಹಲ್ಲಿನ ಸೆಟ್‌ಗಳನ್ನು ಅಳವಡಿಸಲಾಗುತ್ತದೆ ಎಂದರು. 7ರಂದು ಬೆಳಗ್ಗೆ 9ಗಂಟೆಗೆ ಬಿವಿವಿ ಸಂಘದ ಪಿ.ಎಂ.ಎನ್.ಎಂ ದಂತ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ ಇವರಿಂದ ದಂತ ಚಿಕಿತ್ಸಾ ಶಿಬಿರದಲ್ಲಿ ಹಲ್ಲು ಸ್ವಚ್ಛಗೊಳಿಸುವುದು, ಕೆಟ್ಟ ಹಲ್ಲು ಕೀಳುವುದು, ಸಿಮೆಂಟ್ ತುಂಬುವುದು ಹಾಗೂ ಸಂದಿ, ವಾತ, ತಲೆ, ಸೊಂಟ್, ಬೆನ್ನು ಕೈ ಕಾಲು ನೋವುಗಳಿಗೆ ಮಸಾಜ ಕಾರ್ಯ ನಡೆಯಲಿದೆ. ಮಹಾಲಿಂಗೇಶ್ವರ ರಾಜೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ, ಬಬಲಾದಿಯ ಸಿದ್ಧರಾಮಯ್ಯ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಧಾರವಾಡ ಮನಗುಂಡಿಯ ಬಸವಾನಂದ ಶ್ರೀ, ಸ್ಥಳೀಯ ಸಿದ್ದಾರೂಢ ಮಠದ ಸಹಜಾನಂದ ಶ್ರೀ, ಹಳೆ ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಶ್ರೀ ಸಾನಿಧ್ಯ ಮತ್ತು ಪ್ರಕಾಶ್ ರಾಯಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಅಶೋಕ ಹಂಚಲಿ, *ಉಪನ್ಯಾಸಕ ಗಂಗಾಧರ ಅಂಗಡಿ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಠಾಣಾಮಕಾರಿ ಪ್ರವೀಣ ಬೀಳಗಿ, ಎಂ.ಎಚ್.ನಾಯ್ಕರ, ನೇತ್ರಾಧಿಕಾರಿ ವಿಜಯ ಡೋಮನಾಳ ಭಾಗವಹಿಸಲಿದ್ದಾರೆ

ಶಿಬಿರಕ್ಕೆ ಆಗಮಿಸುವವರು ಸಹಾಯಕರೊಬ್ಬರು ಆಧಾರ್, ರೇಷನ್ ಕಾರ್ಡ್ ತರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ



9986239549ಗೆ ಸಂಪರ್ಕಿಸಲು ಕೋರಿದ್ದಾರೆ.


Post a Comment

0 Comments